34ನೆಕ್ಕಿಲಾಡಿ: ಚಾಲಕನಿಲ್ಲದೆ ಚಲಿಸಿದ ಗ್ಯಾಸ್ ಟ್ಯಾಂಕರ್- ಪಲ್ಟಿ

0


ಉಪ್ಪಿನಂಗಡಿ: ಚಾಲಕ ನಿಲ್ಲಿಸಿ ಹೋಗಿದ್ದ ಗ್ಯಾಸ್ ಟ್ಯಾಂಕರೊಂದು ಏಕಾಏಕಿ ಮುಂದಕ್ಕೆ ಚಲಿಸಿ ರಸ್ತೆ ಬದಿ ಮಗುಚಿ ಬಿದ್ದ ಘಟನೆ ಜ.25ರಂದು 34 ನೆಕ್ಕಿಲಾಡಿಯ ಬೊಳ್ಳಾರು ಎಂಬಲ್ಲಿನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಈ ಸಂದರ್ಭ ಟ್ಯಾಂಕರಿಂದ ಯಾವುದೇ ಗ್ಯಾಸ್ ಸೋರಿಕೆಯಾಗದ್ದರಿಂದ ಸಂಭವನೀಯ ಅಪಾಯ ತಪ್ಪಿದೆ. ಮಂಗಳೂರಿನಿಂದ ತಮಿಳುನಾಡಿಗೆ ಹೋಗುವ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅದರ ಚಾಲಕ ಕನಕರಾಜು ಎಂಬವರು ಟ್ಯಾಂಕರನ್ನು ಬೊಳ್ಳಾರು ಎಂಬಲ್ಲಿನ ಇಳಿಜಾರು ಪ್ರದೇಶದಲ್ಲಿ ರಸ್ತೆ ಬದಿ ನಿಲ್ಲಿಸಿ ಮೆಕಾನಿಕ್ ಅನ್ನು ಕರೆದುಕೊಂಡು ಬರಲು ತೆರಳಿದ್ದರು. ಅವರು ತೆರಳಿದ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್ ಏಕಾಏಕಿ ಮುಂದಕ್ಕೆ ಚಲಿಸಿದ್ದು, ಹೆದ್ದಾರಿ ಬದಿ ಮಗುಚಿ ಬಿದ್ದಿದೆ.

ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕದಳದವರು ಹಾಗೂ ಉಪ್ಪಿನಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here