ಪುತ್ತೂರು: ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರ ಬೊಳುವಾರು ಇಲ್ಲಿ 9ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವದ ಹಾಗೂ ಚಂಡಿಕಾಯಾಗದ ಅಂಗವಾಗಿ ಜ.24 ರಂದು ಸಂಜೆ ಸುಸ್ವರ ಮೆಲೋಡೀಸ್ ಉಪ್ಪಿನಂಗಡಿ ಇವರಿಂದ ಭಕ್ತಿ ಭಾವ ಗಾನ ಸಂಭ್ರಮ ಜರಗಿತು.
ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು ಸಾರಥ್ಯದಲ್ಲಿ ವೈಶಾಲಿ ಎಂ.ಕುಂದರ್ ನಿರ್ದೇಶನದಲ್ಲಿ ಮೂಡಿಬಂದ ಸಂಗೀತ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕರಾಗಿ ಬಾಲ ಪ್ರತಿಭೆ ಸ್ಮೃತಿ ಪಲ್ಲತ್ತಾರು, ವೈಶಾಲಿ ಎಂ. ಕುಂದಾರ್, ಸ್ವಪ್ನ ಉಪ್ಪಿನಂಗಡಿ ಮತ್ತು ಕುಶಾಲಪ್ಪ ಉಪ್ಪಿನಂಗಡಿರವರು ಭಾಗವಹಿಸಿದ್ದರು. ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು ಕಾರ್ಯಕ್ರಮ ನಿರೂಪಿಸಿದರು. ಕಲಾವಿದರಿಗೆ ದೇವಳದ ವತಿಯಿಂದ ಪ್ರಸಾದ ನೀಡಿ ಸತ್ಕರಿಸಲಾಯಿತು.