ಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ವತಿಯಿಂದ ಜ.18 ರಂದು ಕುಂದಾಪುರದ ಯುವ ಮೇರಿಡಿಯನ್ ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಮಲ್ಪೆ ಬೀಚ್ ಗೆ ಒಂದು ದಿನದ ಪ್ರವಾಸ ಆಯೋಜಿಸಲಾಗಿತ್ತು. ಸಂಘದ 45 ಮಂದಿ ಮಹಿಳೆಯರು ಪ್ರವಾಸದಲ್ಲಿ ಭಾಗವಹಿಸಿದರು.
ಪ್ರವಾಸದ ನೇತೃತ್ವ ವಹಿಸಿದ್ದ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈರವರು ಮಾತನಾಡಿ ಸಂಘಟನೆ ಅಂದ ಮೇಲೆ ಪ್ರವಾಸ ಆಯೋಜಿಸುವುದು ಮುಖ್ಯ. ಇದರಿಂದ ಮಹಿಳೆಯರಲ್ಲಿ ಒಗ್ಗಟ್ಟು, ಸಾಮರಸ್ಯ, ಸ್ನೇಹ ಬಾಂಧವ್ಯ ಮೂಡಿ ಬರಲು ಸಾಧ್ಯವಾಗುತ್ತದೆ ಎಂದು ಹೇಳಿ ಪ್ರವಾಸವನ್ನು ಯಶಸ್ಸುಗೊಳಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.