ಪುತ್ತೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಜ.26 ರಂದು ಕೆದಂಬಾಡಿ ಗ್ರಾಮದ ಕನ್ನಡಮೂಲೆ ಕುರಿಕ್ಕಾರ ನಾಗೇಶ್ ರೈಯವರ ನಿವಾಸದಲ್ಲಿ ” ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ನಡೆಯಿತು.
ಶ್ರೀ ದೇವತಾ ಭಜನಾ ಮಂದಿರ ತಿಂಗಳಾಡಿಯಿಂದ ಕುಣಿತ ಭಜನೆಯೊಂದಿಗೆ ಶ್ರೀ ದೇವಿಯ ಭವ್ಯ ಮೆರವಣಿಗೆ ಆರಂಭಗೊಂಡು ಕನ್ನಡಮೂಲೆ ತನಕ ನಡೆಯಿತು. ಶ್ರೀ ದೇವಿಯ ಚೌಕಿ ಪೂಜೆ ನಡೆಯಿತು. ಉಪಹಾರ ಹಾಗೂ ಅನ್ನಸಂತರ್ಪಣೆ ನಡೆಯಿತು.
ಯಕ್ಷಗಾನ ಬಯಲಾಟದ ಸೇವಾಕರ್ತರಾದ ಕುರಿಕ್ಕಾರ ನಾಗೇಶ್ ರೈ, ಮುಳಿಂಜಗುತ್ತು ರಮ್ಯ ರೈ, ಮಾ. ತ್ರಿಶಾನ್ ಎನ್ ರೈ ಹಾಗೂ ಮಾ. ಶ್ರೀಯಾನ್ ಎನ್ ರೈ ಹಾಗೂ ಬಂಧುಗಳು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು. ಕಟೀಲು ದೇವಾಲಯದ ಪ್ರಸಾದ್ ಅಸ್ರಣ್ಣ, ಹರಿ ಅಸ್ರಣ್ಣ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಮುಖರಾದ ಮೋಹನ ರೈ ಓಲೆಮುಂಡೋವು, ಚನಿಲ ತಿಮ್ಮಪ್ಪ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಬೂಡಿಯಾರ್ ರಾಧಾಕೃಷ್ಣ ರೈ, ರವೀಂದ್ರನಾಥ ರೈ ಬಳ್ಳಮಜಲು, ಸಾಜ ರಾಧಾಕೃಷ್ಣ ಆಳ್ವ, ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ನಾರಾಯಣ ರೈ ಪರ್ಪುಂಜ ಬಾರಿಕೆ, ಪುರಂದರ ರೈ ಮಿತ್ರಂಪಾಡಿ, ಪ್ರಸನ್ನ ಕುಮಾರ್ ಮಾರ್ತ, ಉಮೇಶ್ ಗೌಡ ಕೋಡಿಬೈಲು, ಮಾರಪ್ಪ ಶೆಟ್ಟಿ ಬೈಲುಗುತ್ತು, ವಿಜಯಕುಮಾರ್ ರೈ ಕೋರಂಗ, ಚಂದ್ರಹಾಸ್ ಬಲ್ಲಾಳ್ ಕೆದಂಬಾಡಿಬೀಡು, ಶಿವನಾಥ ರೈ ಮೇಗಿನಗುತ್ತು, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಆನಂದ ರೈ ಪುಂಡಿಕಾಯಿ, ಹಾರಕರೆ ವೆಂಕಟರಮಣ ಭಟ್, ಮೋಹನ್ ದಾಸ್ ರೈ ಕುಂಬ್ರ, ಮೋನಪ್ಪ ಪೂಜಾರಿ ಬಡೆಕೋಡಿ, ವಿಜಯಹರಿ ರೈ ಬಳ್ಳಮಜಲು ಸೇರಿದಂತೆ ಊರ-ಪರವೂರ ಹಿತೈಷಿಗಳು, ಬಂಧುಗಳು, ಕುಟುಂಬಸ್ಥರು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಕುಣಿತ ಭಜನಾ ತಂಡದವರಿಗೆ ಸ್ಮರಣಿಕೆ ನೀಡಿ, ಗೌರವಿಸಲಾಯಿತು.