ಪುತ್ತೂರು: ರೋಹನ್ ಕಾರ್ಪೋರೇಷನ್ ಅರ್ಪಿಸುವ ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್ಪಿಆರ್ ಫಿಲ್ಮ್ ಹರಿಪ್ರಸಾದ್ ರೈಯಯವರ ಸಹಯೋಗದಲ್ಲಿ ಆನಂದ್ ಎನ್ ಕುಂಪಲ ರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಡಿ.31ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ರಾಹುಲ್ ಅಮೀನ್ ತಿಳಿಸಿದರು.
ಜ.30ರಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಸೌಂಡ್ಸ್ ಆಂಡ್ ಸೌಂಡ್ಸ್ ಲೈಟ್ಸ್ ಚಿತ್ರದ ನಿರ್ದೇಶಕರಾಗಿರುವ ರಾಹುಲ್ ಅಮೀನ್ ಈ ಚಿತ್ರದ ನಿರ್ದೇಶಕರಾಗಿರುತ್ತಾರೆ. ನಾಯಕ ನಟನಾಗಿ ವಿನೀತ್ ಕುಮಾರ್, ನಾಯಕಿಯಾಗಿ ಸಮತಾ ಅಮೀನ್, ತುಳು ಚಿತ್ರ ರಂಗದ ಮೇರು ಕಲಾವಿದರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಮೈಮ್ ರಾಮದಾಸ್, ರೂಪ ವರ್ಕಾಡಿ, ರವಿ ರಾಮಕುಂಜ, ಶೋಭಾ ರೈ, ಶರಣ್ ಚಿಲಿಂಬಿ, ಸಾಹಿಲ್ ರೈ ಗೌರವ ಪಾತ್ರದಲ್ಲಿ ನವನೀತ್ ಶೆಟ್ಟಿ ಕದ್ರಿ ಅಭಿನಯಿಸಿದ್ದಾರೆ.
ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಪ್ರೀಮಿಯರ್ ಶೋ.ಗಳು ಈಗಾಗಲೇ ಯುಎಇಯಲ್ಲಿ ದಾಖಲೆಯ 16 ಶೋ.ಗಳನ್ನು ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ರಾಜ್ಸೌಂಡ್ಸ್ ಆಂಡ್ ಲೈಟ್ಸ್ ಚಿತ್ರದಂತೆ ಎಲ್ಲಾ ರೀತಿಯ ಕಥೆ, ಹಾಸ್ಯಗಳನ್ನು ಈ ಚಿತ್ರದಲ್ಲೂ ಒಳಗೊಂಡಿದೆ. ಕೌಟುಂಬಿಕ ಕಥೆಯನ್ನು ಒಳಗೊಂಡಿರುವ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಚಿತ್ರ ಹೆಸರಿಂತೆ ದೈನಂದಿನ ಜೀವನದ ಸನ್ನಿವೇಶಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ಹಿಂದಿನ ಕೂಡು ಕುಟುಂಬದ ಪದ್ದತಿಯ ಜೀವನ ಶೈಲಿ ಇದ್ದರೆ ಹೇಗಿರಬಹುದು ಎಂಬ ಕಲ್ಪಣೆಯನ್ನು ನಾವು ಚಲನ ಚಿತ್ರದ ಮೂಲಕ ತೋರಿಸಲಾಗುತ್ತಿದೆ ಎಂದರು.
ಚಲನಚಿತ್ರ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ಮಾತನಾಡಿ, ಈ ವಿನೂತನ ಮಾದರಿಯ ಚಲನ ಚಿತ್ರದಲ್ಲಿ ಹಿರಿಯ ಕಲಾವಿದರು ಅಭಿನಯ ಮಾಡಿದ್ದಾರೆ. ಚಿತ್ರದ ಪ್ರೀಮಿಯರ್ ಶೋ ಆದ ಬಳಿಕ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದ್ದು ತೀರ್ಥಹಳ್ಳಿ, ಸೂಂಟಿಕೊಪ್ಪ ಹಾಗೂ ಕಾಸರಗೋಡುಗಳಿಂದಲೂ ಬೇಡಿಕೆಗಳು ಬರುತ್ತಿದೆ ಎಂದರು.
ಚಿತ್ರದ ನಾಯಕ ನಟ ವಿನೀತ್ ಕುಮಾರ್ ಮಾತನಾಡಿ, ರೋಹನ್ ಕಾರ್ಪೋರೇಷನ್ ಆಡಳಿತ ನಿರ್ದೇಶಕ ರೋಹನ್ ಮೋಂತೆರೋ ನೇತೃತ್ವದಲ್ಲಿ ಈಗಾಗಲೇ 3 ಪ್ರೀಮಿಯರ್ ಶೋ ನಡೆದಿದ್ದು, ಪ್ರೇಕ್ಷಕರ ಜನ ಮನಗೆದ್ದಿದೆ. ರೋಹನ್ ಕಾರ್ಪೋರೇಷನ್ ಅರ್ಪಿಸುವ ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾವನ್ನು ಮೊದಲ ಎರಡು ವಾರದಲ್ಲಿ ವೀಕ್ಷಣೆ ಪ್ರೇಕ್ಷಕರಿಗೆ ರೋಹನ್ ಕಾರ್ಪೋರೇಷನ್ ವಿಶೇಷ ಕೊಡುಗೆಳನ್ನು ನೀಡುತ್ತಿದ್ದು ಚಿತ್ರ ವೀಕ್ಷಣೆ ಮಾಡಿ, ಸೈಟ್ ಖರೀಸುವವರಿಗೆ ಶೇ.10ರಷ್ಟು ರಿಯಾಯಿತಿ ನೀಡುತ್ತಿದೆ ಎಂದರು. ಚಿತ್ರದ ನಾಯಕಿ ಸಮತಾ ಅಮೀನ್, ನಿರ್ದೇಶಕ ವಿನಯ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.