ಟಾಟಾ ಎಐಎ ಪುತ್ತೂರು ಶಾಖೆಯ ಪ್ರಥಮ ಎಂಡಿಆರ್‌ಟಿಯಾಗಿ ರಘು ಶೆಟ್ಟಿ ಆಯ್ಕೆ

0

ಪುತ್ತೂರು: TATA AIA ವಿಮಾ ಕಂಪನಿ ಪುತ್ತೂರು ಶಾಖೆಯ ವಿಮಾ ಸಲಹೆಗಾರ ರಘು ಶೆಟ್ಟಿರವರು 2024-25ರ ಆರ್ಥಿಕ ವರ್ಷದಲ್ಲಿ ಸುಮಾರು 40ಲಕ್ಷ ರೂ.ಮಿಕ್ಕಿ ವ್ಯವಹಾರ ಮಾಡಿ ಅಂತರರಾಷ್ಟ್ರೀಯ ಮಾನ್ಯತೆ ಪಡೆದ MDRT ಆಗಿ ಹೊರಹೊಮ್ಮಿದ್ದಾರೆ. ಜೂನ್‌ನಲ್ಲಿ ಅಮೆರಿಕಾದ ಮಯಾಮಿಯಲ್ಲಿ ಜರುಗಲಿರುವ ಮಿಲಿಯನ್ ಡಾಲರ್ ಕಾನ್‌ಫರೆನ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿರುತ್ತಾರೆ.

ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಫೊಟೊಶಾಪ್ ಸ್ಟುಡಿಯೋ ಮಾಲಕರಾಗಿರುವ ಇವರು TATA AIA ವಿಮಾ ಕಂಪನಿಯ ಪುತ್ತೂರು ಶಾಖೆಯಲ್ಲಿ ಪ್ರತಿನಿಧಿಯಾಗಿ ಸೇರಿ ಕಳೆದ ಒಂದು ವರ್ಷದಿಂದ ವಿಮಾ ಸಲಹೆಗಾರರಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಮಂಗಳೂರಿನ ಎ.ಜೆ ಗ್ರಾಂಡ್ ನಲ್ಲಿ ಟಾಟಾ ಎಐಎಯ ಪ್ರಮುಖರಾದ ಕ್ಲಸ್ಟರ್ ಹೆಡ್ ಸತ್ಯನಾರಾಯಣ, ದಿವ್ಯ ಶೆಟ್ಟಿ ಶಾಖಾ ಪ್ರಬಂಧಕ ಜಾಯ್ಸನ್ ಮನೋಜ್ ಗೋನ್ಸಾಲ್ವಿಸ್ ಹಾಗೂ ರಾಘವೇಂದ್ರ ನಾಯಕ್‌ರವರು ರಘು ಶೆಟ್ಟಿ ದಂಪತಿಗೆ ಸನ್ಮಾನ ಮಾಡಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here