ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇವರ ಆಶ್ರಯದಲ್ಲಿ ಪೊರ್ಲು ಇವೆಂಟ್ಸ್, ಜೆಸಿಐ ಪುತ್ತೂರು, ಮಾರ್ಕ್ ಟೆಲಿಕಾಂ, ಅಕ್ಷಯ ಕಾಲೇಜು, ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ ಇವರೆಲ್ಲರ ಸಹಕಾರ-ಸಹಯೋಗದೊಂದಿಗೆ ಫೆ.2ರಂದು ಬಿರುಮಲೋತ್ಸವ ನಡೆಯಲಿದೆ.
ಆ ದಿನ ಮಧ್ಯಾಹ್ನ 3.00 ಗಂಟೆಗೆ ಪ್ರಾರಂಭಗೊಂಡು ರಾತ್ರಿಯವರೆಗೆ ಹಲವಾರು ಕಾರ್ಯಕ್ರಮಗಳು ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಒಟ್ಟು ಕಾರ್ಯಕ್ರಮದ ಹೈಲೈಟ್ ವಿಡಿಯೋವನ್ನು ಆಕರ್ಷಕ ರೀತಿಯಲ್ಲಿ, ಒಂದು ನಿಮಿಷಕ್ಕೆ ಮೀರದಂತೆ ಕ್ರಿಯೇಟಿವ್ ಆಗಿ ಪ್ರಸ್ತುತಪಡಿಸುವ ವಿಶೇಷ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯ ವಿವರ ಮತ್ತು ನಿಯಮಗಳು ಹೀಗಿದೆ:
ಫೆ.2 ರಂದು ಬಿರುಮಲೋತ್ಸವ ಪ್ರಾರಂಭದಿಂದ ಅಂತ್ಯದವರೆಗಿನ ಎಲ್ಲಾ ಕಾರ್ಯಕ್ರಮಗಳ (ಸಭಾ ಕಾರ್ಯಕ್ರಮ ಮತ್ತು ಸ್ಪರ್ಧೆಗಳೂ ಸೇರಿ) ವಿಶೇಷ ಕ್ಷಣಗಳನ್ನು ಸೆರೆ ಹಿಡಿದು ಕ್ರಿಯೇಟಿವ್ ಆಗಿ ಒಂದು ನಿಮಿಷದ ಅವಧಿಯ (ವಿಡಿಯೋ ಡ್ಯುರೇಶನ್) ಒಂದು ಶಾರ್ಟ್ ವಿಡಿಯೋ ಮಾಡಬೇಕು. ಈ ವಿಡಿಯೋಗಳು ಎಂ.ಪಿ.4 ಫಾರ್ಮಾಟ್ ನಲ್ಲೇ ಇರಬೇಕು. ಹೀಗೆ ಎಡಿಟ್ ಮಾಡಿದ ಫೈನಲ್ ವಿಡಿಯೋವನ್ನು ಫೆ.5 ಸಾಯಂಕಾಲದೊಳಗೆ 9980053161 ಸಂಖ್ಯೆಗೆ ವಾಟ್ಸಾಪ್ ಮಾಡಬೇಕು. ಹೀಗೆ ಬಂದ ವಿಡಿಯೋಗಳನ್ನು ತೀರ್ಪುಗಾರರು ಪರಿಶೀಲಿಸಿ, ಅವುಗಳಲ್ಲಿ ಒಂದು ಬೆಸ್ಟ್ ಶಾರ್ಟ್ ವಿಡಿಯೋವನ್ನು ಬಹುಮಾನಕ್ಕಾಗಿ ಆಯ್ಕೆ ಮಾಡುತ್ತಾರೆ.
ಆಯ್ಕೆಯಾದ ಒಂದು ವಿಡಿಯೋಗೆ ನಗದು ಬಹುಮಾನವನ್ನು ನೀಡಲಾಗುವುದು ಮತ್ತು ತೀರ್ಪುಗಾರರ ಮೆಚ್ಚುಗೆ ಪಡೆದ 5 ವಿಡಿಯೋಗಳಿಗೆ ಆಕರ್ಷಕ ಗಿಫ್ಟ್ ಕೂಪನ್ ನೀಡಲಾಗುವುದು. ವಿಜೇತರಿಗೆ ಬಹುಮಾನಗಳನ್ನು ಫೆ.9ರಂದು ಬಿರುಮಲೆ ಬೆಟ್ಟದಲ್ಲಿ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಕಾರ್ಯಕ್ರಮದ ಆಯೊಜಕರು ಮಾಹಿತಿ ನೀಡಿದ್ದಾರೆ.