ಪುತ್ತೂರು: ನಾಗಶ್ರೀ ಭಜನಾ ಮಂಡಳಿ, ಕರಾವಳಿ ಶಿರೂರು, ಬೈಂದೂರು ತಾಲೂಕು ,ಉಡುಪಿ ಜಿಲ್ಲೆ ನಡೆಸಿದ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯಲ್ಲಿ ಡಾ. ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಪುತ್ತೂರಿನ ಗಾನಸಿರಿ ಕಲಾ ಕೇಂದ್ರ (ರಿ) ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ.
ಮಂಗಳೂರು, ಉಡುಪಿ ,ಕುಂದಾಪುರ, ಹೊನ್ನಾವರ, ಭಟ್ಕಳದ 8 ಪ್ರತಿಷ್ಠಿತ ಭಜನಾ ತಂಡಗಳ ನಡುವೆ ಸಾಯಂಕಾಲ 7.00 ರಿಂದ ಬೆಳಿಗ್ಗೆ 3.00 ರವರೆಗೆ ನಡೆದ ಭಜನಾ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಪುತ್ತೂರಿನ ಗಾನಸಿರಿ ತಂಡ ಪ್ರಥಮ ಸ್ಥಾನಿಯಾಗಿ 28000 ರೂ. ನಗದು ಬಹುಮಾನ ಹಾಗೂ ಶಾಶ್ವತ ಫಲಕವನ್ನು ಪಡೆದುಕೊಂಡಿದೆ.
ಸರ್ವೇಶ್ವರಿ ಭಜನಾ ಮಂಡಳಿ ಹೊನ್ನಾವರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಗಾನ ಸುರಭಿ ಮಲ್ಪೆ ತೃತೀಯ ಮತ್ತು ಶಿವರಂಜಿನಿ ಸುರತ್ಕಲ್ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಗಾನಸಿರಿಯ ಅಚಿಂತ್ಯ ರೈ ಅತ್ಯುತ್ತಮ ಹಾಡುಗಾರ ಮತ್ತು ಸುದರ್ಶನ್ ಆಚಾರ್ಯ ಅತ್ಯುತ್ತಮ ತಬಲಾ ವಾದಕ ಪ್ರಶಸ್ತಿಯನ್ನು ಪಡೆದುಕೊಂಡರು.