ಕಡಬ: ಕಡಬ ತಾಲೂಕಿನ ಕೊಯಿಲ ಗ್ರಾಮದ ಕೊನೆಮಜಲುಗುತ್ತು ಶ್ರೀ ದೇವಿ ಉಳ್ಳಾಲ್ತಿ ಉಳ್ಳಾಕುಲು ಹಾಗೂ ಸಹಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ದೈವಗಳ 12ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಫೆ.5ರಂದು ನಡೆಯಲಿದೆ.
ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಹಾಗೂ ವೇದಮೂರ್ತಿ ವೆಂಕಟ್ರಮಣ ಕುದ್ರೆತ್ತಾಯರ ಉಪಸ್ಥಿತಿಯಲ್ಲಿ ಶ್ರೀ ದೈವಗಳಿಗೆ ಪ್ರತಿಷ್ಠಾ ವಾರ್ಷಿಕ ಕಲಶ ನಡೆಯಲಿದೆ. ಬೆಳಿಗ್ಗೆ 8ಕ್ಕೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ನವಕಕಲಶ ತಂಬಿಲ, ಅಶ್ಲೇಷ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ದಯಾನಂದ ದಾಸ್ ಪಾಣಿಗ, ಕಾರ್ಯದರ್ಶಿ ಕೆ.ಸಂಜೀವ ಗೌಡ ಕೊನೆಮಜಲು ಹಾಗೂ ಸದಸ್ಯರು ತಿಳಿಸಿದ್ದಾರೆ.