ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯಡಿ ಕೆಯ್ಯೂರು ಗ್ರಾಮದ ವಾತ್ಸಲ್ಯ ಸದಸ್ಯರಾದ ಬೇಬಿ ಎಂಬ ಅಸಹಾಯಕ ಒಂಟಿ ಮಹಿಳೆಗೆ ಗ್ರಾಮ ಪಂಚಾಯತಿನಿಂದ ನೀಡಿದ ನಿವೇಶನದಲ್ಲಿ ವಾತ್ಸಲ್ಯ ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮನೆಯ ಪಂಚಾಂಗಕ್ಕೆ ಮಣ್ಣು ತುಂಬಿಸುವ ಕಾರ್ಯದಲ್ಲಿ ಅಭಿನವ ಕೇಸರಿ ಮಾಡಾವು ತಂಡದ ಅಧ್ಯಕ್ಷ ವಿನೋದ್ ಕೊಡ್ಲೆ ಹಾಗೂ ಕಾರ್ಯದರ್ಶಿ ಶಶಿಧರ್ ಆಚಾರ್ಯರವರ ನೇತೃತ್ವದಲ್ಲಿ ಸದಸ್ಯರಿಂದ ಶ್ರಮದಾನ ನಡೆಯಿತು.
ಈ ಸಂದರ್ಭದಲ್ಲಿ ದೀಪಕ್ ರೈ, ರಮೇಶ್, ಸಚಿನ್ ಪರ್ತಿಯಡ್ಕ, ಭವಾನಿಶಂಕರ್, ನವೀನ್ ರಾಜ್, ಕುಶನ್, ದೀಕ್ಷಿತ್, ಹರೀಶ್, ನಾಗರಾಜ್ ಶೆಟ್ಟಿ, ಸೇಸಪ್ಪರವರೊಂದಿಗೆ ಕೆಯ್ಯೂರು ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಕುಂಬ್ರ ವಲಯ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ , ಕೆಯ್ಯೂರು ವಲಯ ಮೇಲ್ವಿಚಾರಕರಾದ ಶುಭಾವತಿ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಲತಾ ಸ್ವಾಗತಿಸಿ ವಂದಿಸಿದರು.