ಉಪ್ಪಿನಂಗಡಿ : ಯೋಗ ನಮ್ಮ ಸಂಸ್ಕ್ರತಿಯನ್ನು ಬಿಂಬಿಸುತ್ತದೆ. ರಥ ಸಪ್ತಮಿಯ ದಿನದಂದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಕಾಲಿಡುತ್ತಾನೆ. ಮಾರ್ಗ ಮಾಸದ ಸಪ್ತಮಿಯ ದಿವಸ ಸೂರ್ಯನಿಗೆ ನಮಿಸುವ ಸಲುವಾಗಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಫೆಬ್ರವರಿ 4ರಂದು ರಥಸಪ್ತಮಿಯ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಗುರುಗಳು ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.