ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು- ಕೆಯ್ಯೂರು ಗ್ರಾಮ ಸಾಹಿತ್ಯ ಸಂಭ್ರಮ, ಸಾಧಕರಿಗೆ ಗೌರವಾರ್ಪಣೆ

0

ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವನ್ನು ಮೂಡಿಸುವ ಪರಿಕಲ್ಪನೆಯ ಗ್ರಾಮ ಸಾಹಿತ್ಯ ಸಂಭ್ರಮ ದೇಶದಲ್ಲೇ ಪ್ರಥಮ – ಡಾ. ನರೇಂದ್ರ ರೈ ದೇರ್ಲ

ಪುತ್ತೂರು: ಯುವಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಸಾಹಿತ್ಯದ ಒಲವನ್ನು ಮೂಡಿಸುವ ಪರಿಕಲ್ಪನೆಯ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ರಾಜ್ಯದಲ್ಲೇ ಮಾತ್ರವಲ್ಲದೆ ದೇಶದಲ್ಲಿ ಪ್ರಪ್ರಥಮ ಎಂದು ಸಾಹಿತಿಗಳು ಲೇಖಕರು ಆಗಿರುವ ಡಾ. ನರೇಂದ್ರ ದೇರ್ಲ ಅವರು ತಮ್ಮ ಅಭಿನಂದನಾ ಭಾಷಣದಲ್ಲಿ ನುಡಿದು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನಡೆಸುವಂತಹ ಈ ಕಾರ್ಯಕ್ರಮವು ಪುತ್ತೂರು ತಾಲೂಕಿನ 32 ಗ್ರಾಮಕ್ಕೂ ವಿಸ್ತರಿಸಿರುವುದು ನಿಜಕ್ಕೂ ಅಭಿನಂದನೀಯ ಎಂದು ಶುಭ ಹಾರೈಸಿದರು.


ಜ.25 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಆವರಣದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಕೆಯ್ಯೂರು ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರ ಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ 2025 ಸರಣಿ ಕಾರ್ಯಕ್ರಮ 20 ಬಹಳ ಅದ್ಧೂರಿಯಾಗಿ ನೆರವೇರಿತು.


ವೈಭವದ ಕನ್ನಡ ಭುವನೇಶ್ವರಿಯ ಮೆರವಣಿಗೆ
ಕೆಯ್ಯೂರು ಗ್ರಾಮ ಪಂಚಾಯತ್ ಆವರಣದಿಂದ ಪ್ರಾರಂಭವಾದ ಕನ್ನಡ ಭುವನೇಶ್ವರಿಯ ಮೆರವಣಿಗೆಯಲ್ಲಿ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷ ಯಶ್ವಿತಾ ಸಿ ಎಚ್ ಅವರನ್ನು ಕೆ. ಪಿ. ಎಸ್. ಕೆಯ್ಯೂರು ಕಾರ್ಯಾಧ್ಯಕ್ಷರಾದ ಎ. ಕೆ. ಜಯರಾಮ್ ರೈ ಕನ್ನಡ ಪೇಟ ಹಾಗೂ ಶಾಲು ತೊಡಿಸಿ ಗೌರವಯುತವಾಗಿ ಸ್ವಾಗತಿಸಿದರು. ಪಂಚಾಯತ್ ಅಧ್ಯಕ್ಷರಾದ ಶರತ್ ಕುಮಾರ್ ಕೆ ಇವರು ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆಗೆ ಕನ್ನಡ ಧ್ವಜವನ್ನು ಹಾರಿಸುವುದರ ಮೂಲಕ ಚಾಲನೆ ನೀಡಿದರು. ಅಲ್ಲಿಂದ ತೆರೆದ ವಾಹನದಲ್ಲಿ ಕನ್ನಡ ಭುವನೇಶ್ವರಿಯ ವೇಷಭೂಷಣಗಳಿಂದ ಅಲಂಕೃತ ವಿದ್ಯಾರ್ಥಿನಿ ಹಾಗೂ ಕಾರ್ಯಕ್ರಮದ ಸರ್ವಾಧ್ಯಕ್ಷರನ್ನ ವಾದ್ಯ ಘೋಷಗಳ ಮೂಲಕ ಗ್ರಾಮದ 9 ಶಾಲಾ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆಯಿಂದ ಕೆಪಿಎಸ್ ಕೆಯ್ಯೂರು ಶಾಲಾ ಸಭಾಂಗಣಕ್ಕೆ ಕರೆತರಲಾಯಿತು. ಮೆರವಣಿಗೆಯಲ್ಲಿ ’ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ’ ಹಾಗೂ ’ಕನ್ನಡ ಭುವನೇಶ್ವರಿಗೆ ಜಯವಾಗಲಿ’ ಎಂಬ ಘೋಷಣೆ ಮುಗಿಲು ಮುಟ್ಟುವಂತಿತ್ತು. ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕೆ. ಪಿ. ಎಸ್. ಕೆಯ್ಯೂರು ಪ್ರೌಢಶಾಲಾ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್.ಕೆ ಮಾತನಾಡಿ ಮೊದಲು ಪಟ್ಟಣಕ್ಕೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯ ಕಾರ್ಯಕ್ರಮವು ಇದೀಗ ಗ್ರಾಮ ಗ್ರಾಮಕ್ಕೂ ತಲುಪಿ ವಿದ್ಯಾರ್ಥಿಗಳಿಗೆ ಸಾಹಿತ್ಯ ವೇದಿಕೆ ನೀಡುವ ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ಕೆ ಅಭಿನಂದನೆ ತಿಳಿಸಿ ಶುಭ ಹಾರೈಸಿದರು.


ಎಸ್. ಡಿ. ಎಂ.ಸಿ ಕಾರ್ಯಾಧ್ಯಕ್ಷರಾದ ಎ. ಕೆ. ಜಯರಾಮ ರೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ನಮಿತಾ ಮತ್ತು ಕೆಯ್ಯೂರು ಶಿಕ್ಷಣ ಸಂಯೋಜಕರಾದ ಶಶಿಕಲಾ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷರಾದ ಕಡಮಜಲು ಸುಭಾಸ್ ರೈ ಹಾಗೂ ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


12 ಮಂದಿ ಸಾಧಕರಿಗೆ ಅಭಿನಂದನೆ
ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಸೇವಾ ಸಾಧನೆ ಮಾಡಿರುವ 12 ಮಂದಿ ಸಾಧಕರನ್ನುಹಿರಿಯ ಸಾಹಿತಿಗಳಾದ ಹರಿನಾರಾಯಣ ಮಾಡಾವು ಅಭಿನಂದಿಸಿ ಶುಭ ಹಾರೈಸಿದರು. ಶಶಿರೇಖಾ ಇಳಂತಾಜೆ(ಸಾಹಿತ್ಯ ಕ್ಷೇತ್ರ) ಜೆಸ್ಸಿ. ಪಿ. ವಿ. (ಸಾಹಿತ್ಯ ಮತ್ತು ಸಂಘಟನೆ) ಪ್ರಮಿತ್ ರಾಜ್ ಕಟ್ಟತ್ತಾರು (ಸಾಹಿತ್ಯ ಸೇವೆ,) ಕೊರಗಪ್ಪ ರೈ (ಯಕ್ಷಗಾನ) ಭಾಗ್ಯೇಶ್ ರೈ (ಶಿಕ್ಷಣ), ವೆಂಕಮ್ಮ ಸೂಲಗಿತ್ತಿ (ಸಮಾಜಸೇವೆ), ಚಂದ್ರಶೇಖರ ಗೌಡ ಬಾಕುತ್ತಿಮಾರ್ (ಕೃಷಿ) ನಾರಾಯಣ ಕೆ (ಪುತ್ತ)ಅಜಿಲಾಯ ಕಣಿಯಾರು (ನಾಟಿ ವೈದ್ಯ), ಡಾ. ಶಿವಪ್ರಸಾದ್ ಶೆಟ್ಟಿ (ವೈದ್ಯಕೀಯ), ತಿಮ್ಮಪ್ಪ ಪರವ (ಜಾನಪದ) ಜಯಂತ ಪೂಜಾರಿ (ಸಮಾಜಸೇವೆ ) ಬಾಬು (ಹೈನುಗಾರಿಕೆ )ಇವರನ್ನು ಸನ್ಮಾನಿಸಲಾಯಿತು. ಬಳಿಕ ಬಿಸಿ ಊಟದ ಅಡುಗೆ ಸಹಾಯಕರನ್ನು ಕನ್ನಡ ಶಾಲು ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು. ಭಾಧ್ಯಕ್ಷತೆ ವಹಿಸಿದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ್ ನಾಯಕ್ ಇವರು ಮಾತಾಡುತ್ತಾ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಐ.ಎ.ಎಸ್ ಅಧಿಕಾರಿಗಳಾಗಬೇಕೆಂಬ ಉದ್ದೇಶದಲ್ಲಿ ಐ.ಎ.ಎಸ್ ಕುರಿತು ಮಾಹಿತಿಯನ್ನು ನೀಡುವ ಈ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ಸಾಹಿತ್ಯ ಸಮ್ಮೇಳನಕ್ಕೂ ಪರಿಣಾಮಕಾರಿಯಾಗಿ ಮೂಡಿ ಬರುತ್ತಿದೆ ಇದರ ಫಲಶ್ರುತಿ ಮುಂದಿನ ದಿನದಲ್ಲಿ ಬರಲಿದೆ ಎಂದರು.ಕೆ.ಪಿ.ಎಸ್ ಕೆಯ್ಯೂರು ಶಾಲಾ ಆವರಣವು ಕನ್ನಡದ ತೋರಣ ಹಾಗೂ ಬಾವುಟ ಗುಡುದೀಪಗಳಿಂದ ಸಂಪೂರ್ಣ ಕನ್ನಡಮಯವಾಗಿ ಅಲಂಕೃತಗೊಂಡು ರಾರಾಜಿಸುತ್ತಿತ್ತು.


ಸರ್ವಾಧ್ಯಕ್ಷತೆ ವಹಿಸಿ ಕೆ.ಪಿ.ಎಸ್ ಕೆಯ್ಯೂರು ಇಲ್ಲಿನ ಯಶ್ವಿತಾ ಸಿ. ಎಚ್ ರವರು ಕನ್ನಡ ಭಾಷೆ ಉಳಿಸಲು ಕನ್ನಡ ಶಾಲೆಗಳನ್ನು ಸರ್ಕಾರ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಾಹಿತ್ಯ ಆಸಕ್ತಿ ಬೆಳಸಲು ಪೂರಕವಾಗಿದೆ ಎಂದರು. ಕೆಯ್ಯೂರು ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಮಹಮ್ಮದ್ ಮಿಕ್ದಾದ್ ಅವರು ಸಮಾರೋಪ ಭಾಷಣದಲ್ಲಿ ಆಂಗ್ಲ ಭಾಷೆಯ ವ್ಯಾಮೋಹದಿಂದ ನಮ್ಮ ಮಾತೃ ಭಾಷೆ ಅಳಿವಿನತ್ತ ಸಾಗುತ್ತಿದೆ ಅದರಿಂದ ಆಂಗ್ಲ ಭಾಷೆಯ ವ್ಯಾಮೋಹ ತ್ಯಜಿಸಿ ಮಾತೃಭಾಷಾ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸುತ್ತಾ ಕನ್ನಡ ಸಾಹಿತ್ಯ ಮತ್ತು ನಾಡು ನುಡಿಗಾಗಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ ಬೆಳೆದು ಬಂದ ಹಾದಿಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಬಳಿಕ ಕನ್ನಡದಲ್ಲೂ ಐ ಎ ಎಸ್, ಐ. ಪಿ ಎಸ್ ಬರೆಯಿರಿ ಮಾಹಿತಿ ಕಾರ್ಯಾಗಾರ ಕ. ಸಾ. ಪ. ಪುತ್ತೂರು ಐ ಎ ಎಸ್ ದರ್ಶನ ಇದರ ಪ್ರೇರಕ ಭಾಷಣಕಾರ ಪ್ರಣವ್ ಭಟ್ ರವರಿಂದ ನಡೆಯಿತು.ಸ. ಪ. ಪೂ. ಕಾಲೇಜು ಕೆಯ್ಯೂರು ಇಲ್ಲಿನ ಪ್ರಾಂಶುಪಾಲ ಇಸ್ಮಾಯಿಲ್. ಪಿ. ಸಂದರ್ಭೋಚಿತವಾಗಿ ಮಾತನಾಡಿದರು. ಏಕ ಕಾಲದಲ್ಲಿ ವಿವಿಧ ವೇದಿಕೆಯಲ್ಲಿ ಬಾಲಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಪ್ರವಾಸಕಥನ, ನನ್ನ ಆಪ್ತಮಿತ್ರ, ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ ಲೇಖನ ವಾಚನ ಜರಗಿತು. ಬೊಳಿಕ್ಕಳ ಸ. ಹಿ. ಪ್ರಾ. ಶಾಲೆ ಮುಖ್ಯ ಗುರು ಸೋಮವತಿ. ಎ,ಸ. ಕಿ. ಪ್ರಾ. ಶಾಲೆ ಎಟ್ಯಡ್ಕ ಇದರ ಮುಖ್ಯ ಗುರು ಯಮುನಾವತಿ,ಕಟ್ಟತ್ತಾರು ಸ. ಹಿ. ಪ್ರಾ. ಶಾಲೆ ಪ್ರಭಾರ ಮುಖ್ಯಗುರು ಪ್ರಶಾಂತ ದೊಡ್ಡಮನಿ, ಸ. ಕಿ. ಪ್ರಾ. ಶಾಲೆ ಕಣಿಯಾರು ಮುಖ್ಯ ಗುರು ವಸಂತಿ. ಬಿ. ಎಂ,ಸ. ಕಿ. ಪ್ರಾ. ಶಾಲೆ ತೆಗ್ಗು ಇಲ್ಲಿನ ಮುಖ್ಯೋಪಾಧ್ಯಾಯಿನಿ ರಶ್ಮಿತಾ ಬಿ. ಕೆ., ಸ. ಪ. ಪೂ, ಕಾಲೇಜು ಕೆಯ್ಯೂರು ಇದರ ಬಾಲಕೃಷ್ಣ ಬೇರಿಕೆ ಇವರಗಳು ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೇ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು ಗೋಷ್ಠಿಯ ಗೌರವ ಉಪಸ್ಥಿತರಾಗಿದ್ದು, ಗೋಷ್ಠಿಗಳ ನಿರೂಪಣೆಯನ್ನು ಕೆ. ಪಿ. ಎಸ್. ಕೆಯ್ಯೂರು ಸಹಶಿಕ್ಷಕರಾದ ಸುಪ್ರಭಾ. ಪಿ, ಶೈಲಜಾ. ಸಿ. ಎನ್, ಸಂಧ್ಯಾ. ಜಿ. ಕೆ, ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯರಾದ ಪ್ರಿಯಾ ಸುಳ್ಯ, ರಶ್ಮಿತಾ ಸುರೇಶ್ ಜೋಗಿಬೆಟ್ಟು ನಿರ್ವಹಿಸಿದರು.ಕೆ. ಪಿ. ಎಸ್ ಕೆಯ್ಯೂರು ಪದವೀಧರೇತರ ಮುಖ್ಯ ಗುರುಗಳಾದ ಬಾಬು ಎಂ ಸ್ವಾಗತಿಸಿ,ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ. ಪಿ. ಎಸ್ ಪ್ರೌಢ ಶಾಲಾ ಉಪ ಪ್ರಾಂಶುಪಾಲರಾದ ವಿನೋದ್ ಕುಮಾರ್ ಅವರು ವಂದಿಸಿದರು. ಚಿಗುರೆಲೆ ಸಾಹಿತ್ಯ ಬಳಗದ ರಶ್ಮಿತಾ ಸುರೇಶ್ ಜೋಗಿಬೆಟ್ಟು ಮತ್ತು ಜಿ. ಪಿ. ಟಿ. ಶಿಕ್ಷಕ ರವಿ. ಟಿ. ಎಂ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here