ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ- 22 ಮಂದಿ ಕಣದಲ್ಲಿ
ಕಡಬ: ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆಯು ಫೆ.9ರಂದು ನಡೆಯಲಿದ್ದು, ಈ ಸಂಬಂಧ ಅಂತಿಮ ಕಣದಲ್ಲಿ 22 ಮಂದಿ ಕಣದಲ್ಲಿದ್ದು ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ಸಂಘದ ಆರು ಸ್ಥಾನಗಳಿಗೆ 12 ನಿರ್ದೇಶಕರ ಆಯ್ಕೆ ನಡೆಯಲಿದೆ. ಇದರಲ್ಲಿ ಈಗಾಗಲೇ ಪರಿಶಿಷ್ಟ ಪಂಗಡ ಮೀಸಲು 1 ಸ್ಥಾನಕ್ಕೆ ಯೇಗೇಂದ್ರ ಕುಮಾರ್ ಬಿ.ಎಸ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ 6 ಸ್ಥಾನಗಳಿದ್ದು 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಮಹಮ್ಮದ್ ಆಲಿ, ಕೇಶವ ಎಸ್. ಮ್ಯಾಥ್ಯೂ ಟಿ.ಎಂ. ಕರುಣಾಕರ ಸಾಲಿಯಾನ್, ಜಯಚಂದ್ರ ರೈ ಕೆ., ಚಿದಾನಂದ ಕೆ, ಶಶಾಂಕ ಗೋಖಲೆ, ಶಿವಪ್ರಸಾದ್ ಪಿ.ವಿ. ಅಚ್ಯುತ ಡಿ. ಶ್ರೀಧರ ಎಸ್.ಎನ್. ಕೊರಗಪ್ಪ ಗೌಡ ಪಿ. ಸತೀಶ್ ಎಂ. ಪರಿಶಿಷ್ಠ ಜಾತಿ ಮೀಸಲು 1 ಸ್ಥಾನಕ್ಕೆ ದೇವಯ್ಯ ಹಾಗೂ ಪಕೀರ, ಹಿಂದುಳಿದ ವರ್ಗ ಎ, 1 ಸ್ಥಾನಕ್ಕೆ ಕೃಷ್ಣಪ್ಪ ದೇವಾಡಿಗ, ಮೇದಪ್ಪ, ಹಿಂದುಳಿದ ವರ್ಗ ಬಿ. 1 ಸ್ಥಾನಕ್ಕೆ ಸತೀಶ್ಚಂದ್ರ ಶೆಟ್ಟಿ ಬೀರುಕ್ಕು ಹಾಗೂ ಶಿವಪ್ರಸಾದ್ ರೈ, ಮಹಿಳಾ ಮೀಸಲು 2 ಸ್ಥಾನಕ್ಕೆ ಸುಮನ, ಉಜ್ವಲ ಹೆಬ್ಬಾರ್, ಶಕಿಲ, ಲೀಲಾವತಿ ಅವರುಗಳು ನಾಮಪತ್ರ ಸಲ್ಲಿಸಿದ್ಧಾರೆ. ಚುನಾವಣಾಧಿಕಾರಿಯಾಗಿ ಪುತ್ತೂರು ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಕರ್ತವ್ಯ ನಿರ್ವಹಿಸುತ್ತಿದ್ದಾರೆ.