ವಿಷನ್ ಐ ಕೇರ್ ಅಪ್ಟಿಕಲ್ಸ್‌ನ ಸಹಸಂಸ್ಥೆ ದರ್ಬೆಯಲ್ಲಿ ಶುಭಾರಂಭ: ಗ್ರಾಹಕರಿಗಿದೆ 30% ಆಫರ್

0

ಪುತ್ತೂರು: ವಿಷನ್ ಐ ಕೇರ್ ಅಪ್ಟಿಕಲ್ಸ್ ಕಣ್ಣಿನ ಪರೀಕ್ಷಾ ಕೇಂದ್ರದ ಸಹಸಂಸ್ಥೆ ಪುತ್ತೂರಿನ ದರ್ಬೆ ಬಳಿಯ ಕಲ್ಲಾರೆಯಲ್ಲಿರುವ ಇಎನ್‌ಟಿ ತಜ್ಞ ಡಾ.ರಾಮ್ ಮೋಹನ್ ಕ್ಲೀನಿಕ್ ಬಳಿ ಫೆ.7 ರಂದು ಶುಭಾರಂಭಗೊಂಡಿತು. ಡಾಕ್ಟರ್ಸ್ ಫೋರಂನ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮತ್ತು ಡಾ. ರಾಮ್ ಮೋಹನ್ ಅವರು ದೀಪ ಬೆಳಗಿಸುವುದರ ಮೂಲಕ ಕಣ್ಣಿನ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿದರು.


ಉದ್ಘಾಟನೆ ಬಳಿಕ ಮಾತನಾಡಿದ ಡಾ.ಸುರೇಶ್ ಪುತ್ತೂರಾಯ, ಸುಜನ್ ರಾಜ್ ಶೆಟ್ಟಿ ಮತ್ತು ಅವರ ಮನೆಯವರು ಒಟ್ಟು ಸೇರಿಕೊಂಡು ಪ್ರಾರಂಭಿಸಿದ ವಿಷನ್ ಐ ಕೇರ್ ಅಪ್ಟಿಕಲ್ಸ್ ಸಂಸ್ಥೆಯ ಸಹಸಂಸ್ಥೆ ದರ್ಬೆಯಲ್ಲಿ ಶುಭಾರಂಭಗೊಂಡಿದೆ. ದೇವರ ಅನುಗ್ರಹದಿಂದ ಇನ್ನಷ್ಟು ಸಂಸ್ಥೆಗಳನ್ನು ಆರಂಭಗೊಳಿಸುವಂತಾಗಲಿ ಎಂದು ಶುಭಹಾರೈಸಿದರು.


ಇದೇ ವೇಳೆ ಮಾತನಾಡಿದ ಡಾ.ರಾಮ್ ಮೋಹನ್, ದೃಷ್ಟಿ ಉತ್ತಮವಾಗಿದ್ದರೆ ನಮ್ಮ ಜೀವನವೇ ಉತ್ತಮವಾಗಿರುತ್ತದೆ. ಈ ಸಂಸ್ಥೆಯಿಂದ ಹಲವರಿಗೆ ಉಪಕಾರಿಯಾಗಲಿ ಎಂದು ಹೇಳಿ ಸಂಸ್ಥೆಗೆ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಪದ್ಮಶ್ರೀ ಮೆಡಿಕಲ್ಸ್ ಮಾಲಕ ತಾರನಾಥ ರೈ, ಅಮೃತ್ ಮೆಡಿಕಲ್ಸ್ ಮಾಲಕ ವಿನೋದ್ ಕುಮಾರ್ ಬಳ್ಳಾಲ್, ಇಎನ್‌ಟಿ ಸರ್ಜನ್ ಡಾ.ವಿಷ್ಣು ಪ್ರಸಾದ್, ಬಿಜೆಪಿ ಮುಖಂಡ ಬೂಡ್ಯಾರ್ ರಾಧಕೃಷ್ಣ ರೈ, ಇಂದ್ರಪ್ರಸ್ತ ಶಾಲೆಯ ಸಂಚಾಲಕ ಯು.ಜಿ.ರಾಧ, ಮಾತೃಶೀ ಸೋಲಾರ್ ಮಾಲಕ ರವಿ ಕುಮಾರ್ ರೈ, ಪ್ರವೀಣ್ ರೈ ಕೂಡೇಲು, ಪದ್ಮಶ್ರೀ ಗ್ರೂಪ್‌ನ ರತ್ನಾಕರ ರೈ, ನಾರಾಯಣ ಶೆಟ್ಟಿ, ಸೀತಾರಾಮ ಶೆಟ್ಟಿ ಮಲ್ಲಿಗೆ ಇನ್ನಿತರ ಗಣ್ಯರು ಆಗಮಿಸಿ ಶುಭಹಾರೈಸಿದರು.


ಮಾಲಕ ಸುಜನ್ ರಾಜ್ ಶೆಟ್ಟಿ ಅವರ ಸಹೋದರ, ಅಧ್ಯಾಪಕರ ಸಹಕಾರಿ ಸಂಘದ ಜಿಎಂ ಸುಚಿನ್ ರಾಜ್ ಶೆಟ್ಟಿ ವಂದಿಸಿದರು ಮತ್ತು ಇವರ ಪತ್ನಿ ಸ್ವಾತಿ, ಮಾಲಕರ ತಂದೆ ಜಯರಾಮ ಶೆಟ್ಟಿ, ಪತ್ನಿ ಹರ್ಷಿತ ಅವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಷಣ್ಮುಖ ಪಡ್ನೂರು ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಿಬ್ಬಂದಿ ಭವ್ಯಶ್ರೀ ಹಾಗೂ ಪಾವನಾಕ್ಷಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here