ಕಾಣಿಯೂರು: ಕೊಡಿಯಾಲ ಗ್ರಾಮದ ಕಾಣಿಯೂರು- ಕಲ್ಪಡ ರಸ್ತೆಯ ಗ್ರಾಮ ಪಂಚಾಯತ್ ಅನುದಾನದ ಕಾಂಕ್ರೀಟ್ ಕಾಮಗಾರಿಗೆ ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರ್ಷನ್ ಕೆ. ಟಿ. ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಿತ್ರಾ, ಸದಸ್ಯರಾದ ವಿಜಯ ಕುಮಾರಿ, ಶ್ರೀ ಉಳ್ಳಾಕುಲು ದೈವಸ್ಥಾನ ಕಲ್ಪಡ ಇದರ ಆಡಳಿತ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ. ಎಂ., ಮೋಕ್ತೇಸರರಾದ ಶಿವರಾಮ ಉಪಾಧ್ಯಾಯ, ಬಾಲಕೃಷ್ಣ ಪೋಳಾಜೆ, ಅಶ್ವಿನ್ ಕುಮಾರ್ ನಟ್ಟಿಹಿತ್ಲು, ದೇವಣ್ಣ ಕಲ್ಪಡ, ಉಕೇಶ್ ಕಂಪ, ಪ್ರಸಾದ್ ಕಲ್ಪಡ, ರಾಮಣ್ಣ ಕೊಡೆಂಕಿರಿ, ಭಾಸ್ಕರ ಗೌಡ, ದಿನೇಶ್ ಆರ್ವಾರ, ರಶ್ಮಿ ಕಲ್ಪಡ ಮತ್ತಿತರರು ಉಪಸ್ಥಿತರಿದ್ದರು.