ಪುತ್ತೂರು: ಪುತ್ತೂರು ತಾಲೂಕು ಮಹಿಳಾ ಗೌಡ ಸಂಘದ ವತಿಯಿಂದ ಈಶ್ವರಮಂಗಲ ವಲಯದ ಕಾವು ಸಂಜೀವ ಗೌಡ ಅವರ ನಿವಾಸದಲ್ಲಿ ಕೆಡ್ಡಸ ಆಚರಣೆಯ ಪ್ರಾತ್ಯಕ್ಷಿತೆ ಕಾರ್ಯಕ್ರಮ ಫೆ.8ರಂದು ನಡೆಯಿತು.
ತಾಲೂಕು ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜಾ ಬೆಳಿಯಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಿದರು. ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಕಾವು ಸಂಜೀವ ಗೌಡ ಅವರು ಜೊತೆಯಾಗಿ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.
ಚಂಚಲ ಲೋಕೇಶ್ ಗೌಡ ಚಾಕೋಟೆಯವರು ಕೆಡ್ಡಸ ಹಬ್ಬದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಕಲಾವತಿ ಸಂಜೀವ ಗವಡ ಪಟ್ಲಡ್ಕ ಅವರು ಕೆಡ್ಡಸ ಆಚರಣೆಯ ಪ್ರಾತ್ಯಕ್ಷಿತೆಯನ್ನು ನಡೆಸಿ ವಿವರಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಕೋಶಾಧಿಕಾರಿ ಶಿವರಾಮ ಮತಾವು, ಕುಂಬ್ರ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾಗಿರುವ ಈಶ್ವರಮಂಗಲ ವಲಯ ಉಸ್ತುವಾರಿ ಲೋಕೇಶ್ ಚಾಕೋಟೆಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನವೀನ ಬಿ.ಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಷಾಲಕ್ಷ್ಮೀ ಕೆ.ಎಸ್ ಪ್ರಾರ್ಥಿಸಿದರು. ತಾಲೂಕು ಮಹಿಳಾ ಗೌಡ ಸಂಘದ ಕಾರ್ಯದರ್ಶಿ ಸಂಧ್ಯಾ ಶಶಿಧರ್ ವಂದಿಸಿದರು. ಖಜಾಂಚಿ ರತ್ನಕಿಶೋರ್ ಕಾರ್ಯಕ್ರಮ ನಿರೂಪಿಸಿದರು.