ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಫೆ.11 ರಂದು ಸಂಜೆ 5 ಗಂಟೆಗೆ ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್ ಎದುರು ಭಾಗದಲ್ಲಿ ನಡೆಯಲಿದೆ.
ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸಭಾಧ್ಯಕ್ಷತೆ ವಹಿಸಲಿದ್ದು ಸಂಪ್ಯ ಪೊಲೀಸ್ ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷ ವಾಮನ ಪೈ ಪ್ರತಿಜ್ಞಾ ವಿಧಿ ಬೋಧನೆ ಮಾಡಲಿದ್ದಾರೆ. ಅತಿಥಿಗಳಾಗಿ ಉದ್ಯಮಿ ಮಹಮ್ಮದ್ ಸಾದಿಕ್ ಹಾಜಿ, ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಕುತ್ಯಾಡಿ, ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಜೂಲಿಯಾನ ಮಸ್ಕರೇನಸ್, ಪುರಂದರ ರೈ ಕೋರಿಕ್ಕಾರು, ಮೋನಪ್ಪ ಪೂಜಾರಿ ಬಡಕ್ಕೋಡಿ, ಪಿ.ಎಂ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಕಾಂತ ಶಾಂತಿವನ, ಶ್ಯಾಮ್‌ಸುಂದರ ರೈ ಕೊಪ್ಪಳ ಭಾಗವಹಿಸಲಿದ್ದಾರೆ. ಎಲ್ಲಾ ವರ್ತಕ ಬಂಧುಗಳು, ಗ್ರಾಹಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುಂತೆ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ನಿಯೋಜಿತ ಅಧ್ಯಕ್ಷ ಮಹಮ್ಮದ್ ಪಿ.ಕೆ, ಪ್ರಧಾನ ಕಾರ್ಯದರ್ಶಿ ಭವ್ಯ ರೈ ಹಾಗೂ ಕಾರ್ಯಕಾರಿ ಸಮತಿ ಸರ್ವ ಸದಸ್ಯರುಗಳ ಪ್ರಕಟಣೆ ತಿಳಿಸಿದೆ.
ನೂತನ ಸಮಿತಿ
ಅಧ್ಯಕ್ಷ ಮಹಮ್ಮದ್ ಪಿ.ಕೆ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಉಪಾಧ್ಯಕ್ಷ ಸದಾಶಿವ, ಕೋಶಾಧಿಕಾರಿ ರಮೇಶ್ ಆಳ್ವ ಕಲ್ಲಡ್ಕ, ಜತೆ ಕಾರ್ಯದರ್ಶಿ ರೇಷ್ಮಾ ಮೆಲ್ವಿನ್, ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಗೌರವ ಸಲಹೆಗಾರರು ಅಬ್ದುಲ್ ರಹೀಮಾನ್ ಹಾಜಿ, ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಕಾಂತ ಶಾಂತಿವನ. ಕಾರ್ಯಕಾರಿ ಸಮಿತಿ ಸದಸ್ಯರುಗಳು: ಕೆ.ದಿವಾಕರ ಶೆಟ್ಟಿ, ನಾರಾಯಣ ಪೂಜಾರಿ ಕುರಿಕ್ಕಾರ, ಸುಂದರ ರೈ ಮಂದಾರ, ಮೆಲ್ವಿನ್ ಮೊಂತೆರೋ, ಎಸ್.ಮಾಧವ ರೈ ಕುಂಬ್ರ, ಮೋಹನದಾಸ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ, ಸಂಶುದ್ದೀನ್ ಎ.ಆರ್, ಶರತ್ ಕುಮಾರ್ ರೈ, ಪ್ರದೀಪ್ ಶಾಂತಿವನ, ಉದಯ ಆಚಾರ್ಯ, ಲಕ್ಷ್ಮಣ ಕೆ, ಅಝರ್ ಷಾ ಕುಂಬ್ರ, ಶುತಿಚಂದ್ರ, ಬಾಲಕೃಷ್ಣ ಪಾಟಾಳಿ, ಹನೀಪ್, ಪುರಂದರ ರೈ ಕೋರಿಕ್ಕಾರು, ಹನೀಫ್ ಶೇಖಮಲೆರವರುಗಳು ಪದ ಸ್ವೀಕಾರ ಮಾಡಲಿದ್ದಾರೆ.