ಕಾಣಿಯೂರು: ಮುರುಳ್ಯ – ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು, ಇದರ ಕಾಣಿಯೂರು ಶಾಖೆಯ ಸಲಹಾ ಸಮಿತಿ ಸದಸ್ಯೆ ಸುಧಾರಾಣಿ ದಿವಾಕರ ಗೌಡ, ಕಡಿರಮೂಲೆರನ್ನು ಕಾಣಿಯೂರು ಶಾಖೆಯ ಸಲಹಾ ಸಮಿತಿ ಸಭೆಯಲ್ಲಿ ಅಭಿನಂದಿಸಲಾಯಿತು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು, ಇದರ ಉಪಾಧ್ಯಕ್ಷರಾದ ಯು.ಪಿ ರಾಮಕೃಷ್ಣ ಮಾತನಾಡಿ, ಸಹಕಾರ ಸಂಘದಲ್ಲಿ ಇನ್ನಷ್ಟು ಸ್ಥಾನವನ್ನು ಪಡೆದು ಅಭಿವೃದ್ಧಿ ಕೆಲಸವನ್ನು, ಸಾಧನೆಯನ್ನು ಮಾಡಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಣಿಯೂರು ಶಾಖೆಯ ಸಲಹಾ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ , ಎಂ. ಎನ್ ಗೌಡ, ಚಂದ್ರಶೇಖರ ಗೌಡ ಕೆ, ಸೀತಾರಾಮ ಗೌಡ ಮುಂಡಾಳ, ವೆಂಕಟ್ರಮಣ ಗೌಡ ಮರಕ್ಕಡ, ಶೇಷಪ್ಪ ಗೌಡ ಅಬಿರ, ಶೂರಪ್ಪ ಗೌಡ ಪಟ್ಟೆತನ, ನಿರ್ಮಲ ಕೇಶವ ಗೌಡ, ಸುಜಾತ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಸುಧಾಕರ ಕೆ, ಕಾಣಿಯೂರು ಶಾಖೆ ಮ್ಯಾನೇಜರ್ ಪದ್ಮಶ್ರೀ ಮತ್ತು ಸಿಬ್ಬಂದಿ ಚೇತನ್ ಕುಮಾರ್ ಉಪಸ್ಥಿತರಿದ್ದರು.