ಪುತ್ತೂರು : ಸರಕಾರಿ ಹುದ್ದೆಗಳಿಗೆ ಕರಾವಳಿ ಜನತೆ ಪ್ರಯತ್ನವೇ ಮಾಡುವುದಿಲ್ಲ ಎಂಬ ಕೂಗಿನ ಮಧ್ಯೆಯೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭಿಸಿ , ವಿವಿಧ ನೇಮಕಾತಿಗಳ ಪರೀಕ್ಷೆಗಳಲ್ಲಿ ಭರ್ಜರಿ ಫಲಿತಾಂಶವನ್ನು ದಾಖಲಿಸುವುದರ ಮೂಲಕ ಕ್ರಾಂತಿಯನ್ನು ಉಂಟು ಮಾಡುತ್ತಿರುವ ಹೆಸರಾಂತ ವಿದ್ಯಾಮಾತಾ ಅಕಾಡೆಮಿಯು 2024 -25ರ ಸಾಲಿನಲ್ಲಿ ಕೆ- ಸೆಟ್ ಪರೀಕ್ಷೆಗೂ ತರಬೇತಿಯನ್ನು ಆನ್ಲೈನ್ನಲ್ಲಿ ಪ್ರಾರಂಭಿಸಿ , ಇಬ್ಬರು ಅಭ್ಯರ್ಥಿಗಳು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗುವುದರ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.
ಕಳೆದ ಸಾಲಿನಲ್ಲೂ ಕೂಡ ಅಕಾಡೆಮಿಯ ಮೂವರು ಅಭ್ಯರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದರು.
ಮೂಲತಃ ಪುತ್ತೂರಿನ ಪಾಂಗಲಾಯಿ ನಿವಾಸಿ , ಪ್ರಸ್ತುತ ಬೆಂಗಳೂರಿನಲ್ಲಿ ಗಿರಿನಗರದಲ್ಲಿ ನೆಲೆಸಿರುವ ಸತ್ಯನಾರಾಯಣ ಬಿ. ಎಸ್ ಇವರ ಪತ್ನಿ , ಬೆಂಗಳೂರಿನ ಚನ್ನಸಂದ್ರ ಆರ್. ಎನ್.ಎಸ್ – ಪಿಯು ಕಾಲೇಜಿನ ಬಯೋಲಾಜಿ ಉಪನ್ಯಾಸಕಿ ಪ್ರೇಮಲತಾ ಕೆ, ಹಾಗೂ ಮೂಲತಃ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾಮದ ಸಂತ್ಯಾಡ್ಕ ಜಾಲು ನಿವಾಸಿ ರೋಹಿತ್ ಎಸ್.ಎಂ ಇವರ ಪತ್ನಿ ಪ್ರಸ್ತುತ ಬೆಂಗಳೂರಿನ ಸೈಂಟ್ ವಿನ್ಸೆಂಟ್ ಪಲ್ಲೊಟ್ಟಿ ಪಿಯು ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕಿಯಾಗಿರುವ ರಶ್ಮಿತಾ ಎಂ ಇವರು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಕೆ -ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರ ಸಾಧನೆಗೆ ಆಡಳಿತ ಮಂಡಳಿ ಮತ್ತು ಬೋಧಕ ವೃಂದ ಅಭಿನಂದನೆ ಸಲ್ಲಿಸಿದೆ.
ತರಬೇತಿಯ ಅವಶ್ಯಕತೆ ಇರುವವರು 9620468869 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೆ – ಸೆಟ್ ಪ್ರಯೋಜನಗಳು
*ಕೆ ಸೆಟ್ ಪಾಸಾದರೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಲು ಅವಕಾಶವಿದೆ. ಪಿ.ಹೆಚ್.ಡಿ ರಿಸರ್ಚ್ ಅಪ್ಲೈ ಮಾಡಿದಾಗ ಲಿಖಿತ ಪರೀಕ್ಷೆ ಇರದೇ ಮೌಖಿಕ ಪರೀಕ್ಷೆ ಮಾತ್ರ ಇರುತ್ತದೆ. *ಕೆ -ಸೆಟ್ ಉತ್ತೀರ್ಣರಾದವರು ನೆಟ್ ಎಕ್ಸಾಮ್ ಉತ್ತೀರ್ಣರಾದರೆ ಆಲ್ ಓವರ್ ಇಂಡಿಯಾ ಅಸಿಸ್ಟೆಂಟ್ ಪ್ರೊಫೆಸರ್ ಗೆ ಅಪ್ಲೈ ಮಾಡಬಹುದು. ಏಡೆಡ್ ಅಥವಾ ಅನ್ ಏಡೆಡ್ ಸರಕಾರಿ ಸಾಮ್ಯದಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಡೈಲಿ ವೆಜೆಸ್, ಪಾರ್ಟ್ ಟೈಮ್ ಗೆ ಮೊದಲ ಆದ್ಯತೆ ಪಡೆಯಬಹುದು.
*ಕೆ -ಸೆಟ್ ಪಾಸಾದವರು NET+JRF(ಜೂನಿಯರ್ ರಿಸರ್ಚ್ ಫೆಲೋಶಿಪ್) ಪರೀಕ್ಷೆ ಕೂಡ ಉತ್ತೀರ್ಣರಾದರೆ ಪಿ.ಹೆಚ್.ಡಿ ಗೆ ಖಾಲಿ ಇರುವ ಯೂನಿವರ್ಸಿಟಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು , ಪಿ.ಎಚ್.ಡಿ ಮಾಡುತ್ತಿರುವಾಗಲೇ ನಾಲ್ಕು ವರ್ಷದ ಅವಧಿಯಲ್ಲಿ ಪ್ರತಿ ತಿಂಗಳು 45 ರಿಂದ 50 ಸಾವಿರ ರಿಸರ್ಚ್ ಸಬ್ಮಿಟ್ ಆಗುವವರೆಗೂ ಫೆಲೋಶಿಪ್ ಬರುತ್ತದೆ.
*K-SET/NET ಪರೀಕ್ಷೆಗೆ ತರಬೇತಿಯನ್ನು ಸಾಮಾನ್ಯವಾಗಿ ಸದ್ಯ ಉಪನ್ಯಾಸಕ ವೃತ್ತಿಯಲ್ಲಿ ಹಲವಾರು ವರ್ಷಗಳ ಅನುಭವ ಇರುವವರೇ ಪಡೆದುಕೊಳ್ಳುತ್ತಾರೆ. ಅಂತಹ ವೃತ್ತಿಪರ ಶಿಕ್ಷಕ/ ಉಪನ್ಯಾಸಕರಿಗೆ ತರಬೇತಿ ನೀಡುವ ಸವಾಲನ್ನು ಸಮರ್ಥವಾಗಿ ನಾವು ನಿಭಾಯಿಸುತ್ತಿರುವುದರಿಂದ ನಮ್ಮಲ್ಲಿ K- SET/NET/CTET/TET ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪ್ರತಿ ವರ್ಷ ದಾಖಲಿಸುತ್ತಿದ್ದೇವೆ. 5 ವರ್ಷದ ವಿದ್ಯಾರ್ಥಿಗಳಿಂದ 50 ವರ್ಷದವರೆಗಿನ ವಿವಿಧ ನೇಮಕಾತಿಗಳಿಗೆ /ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವುದೇ ನಮ್ಮ ಸಂಸ್ಥೆಯ ವಿಶೇಷತೆ. ಈ ನಿಟ್ಟಿನಲ್ಲಿ ಕೆ- ಸೆಟ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಇಬ್ಬರು ಉತ್ತೀರ್ಣರಾಗಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ.
ಭಾಗ್ಯೇಶ್ ರೈ
ಆಡಳಿತ ನಿರ್ದೇಶಕರು.
” ತರಬೇತಿ ಖುಷಿಯನ್ನು ನೀಡಿದೆ “
ನಾನು ಮೂಲತಃ ಪಾಂಗ್ಲಾಯಿ ನಿವಾಸಿಯಾಗಿದ್ದು , ಸದ್ಯ ಬೆಂಗಳೂರಿನಲ್ಲಿ ಉಪನ್ಯಾಸಕಿ ಆಗಿರುತ್ತೇನೆ. ನಮ್ಮ ಊರಿನ ವಿದ್ಯಾಮಾತಾ ಅಕಾಡೆಮಿಯು ಆನ್ಲೈನ್ ಮೂಲಕ ತರಬೇತಿಯನ್ನು ಕೊಡುತ್ತಿರುವ ವಿಷಯ ತಿಳಿದು, ನಾನು ಸಂಸ್ಥೆಯಲ್ಲಿ ತರಬೇತಿ ಯನ್ನು ಪಡೆದು ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದೇನೆ .ನಮ್ಮ ಊರಿನ ಸಂಸ್ಥೆ ಇಂತಹ ಅತ್ಯುತ್ತಮ ತರಬೇತಿ ನೀಡುತ್ತಿರುವುದು ನಾವೆಲ್ಲರೂ ಖುಷಿ ಪಡುವ ವಿಚಾರವಾಗಿದೆ .ವಿದ್ಯಾಮಾತಾ ಅಕಾಡೆಮಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
ಪ್ರೇಮಲತಾ ಕೆ ,
ವಿದ್ಯಾರ್ಥಿ.
” ನೀರಿಕ್ಷೆಯನ್ನು ನಿಜಗೊಳಿಸುತ್ತಿದೆ ವಿದ್ಯಾಮಾತಾ “
ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವೇ ಇಲ್ಲದ ನಮ್ಮ ಕರಾವಳಿ ಭಾಗದಲ್ಲಿ ವಿದ್ಯಾಮಾತಾ ಅಕಾಡೆಮಿಯ ಪ್ರಯುತ್ನ ನಿಜಕ್ಕೂ ಮೆಚ್ಚುವಂತದ್ದು, ನಮ್ಮಂತಹ ಉಪನ್ಯಾಸಕರಿಗೆ ತರಬೇತಿಯ ವಿಷಯದಲ್ಲಿ ತುಂಬಾನೇ ನಿರೀಕ್ಷೆ ಇರುವಂಥದ್ದು ಸಹಜ.
ಅದನ್ನು ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರ ತಂಡ ಸಮರ್ಥವಾಗಿ ನಿಭಾಯಿಸುತ್ತಿದೆ, ಇದರಿಂದ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ಯಾವುದೇ ಅಭ್ಯರ್ಥಿಯು ನೇಮಕಾತಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಖಂಡಿತಾ ಅಕಾಡೆಮಿಯ ತರಬೇತಿಯ ಮೂಲಕ ಸಾಧಿಸಬಹುದು ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿರುತ್ತೇನೆ.
ರಶ್ಮಿತಾ ಎಂ ,
ವಿದ್ಯಾರ್ಥಿ.