ಕುದ್ಮಾರು ಶಾಲೆಯಲ್ಲಿ ಕಮ್ಮಟ -ಮನುಕುಲ ಒಂದೇ ನಾಟಕ- ಸ್ವಚ್ಛತೆ ಅರಿವು ಕಾರ್ಯಕ್ರಮ

0

ಕಾಣಿಯೂರು: ಸಮಾಜ ಕಲ್ಯಾಣ ಇಲಾಖೆ ಮತ್ತು ವಾರ್ತಾ ಇಲಾಖೆ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಕುದ್ಮಾರು ಶಾಲೆಯಲ್ಲಿ ಮನುಕುಲ ಒಂದೇ -ಕಮ್ಮಟ ನಾಟಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಪ್ರಹಸನದ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ನಮ್ಮ ಜವಾಬ್ದಾರಿ ಈ ನಿಟ್ಟಿನಲ್ಲಿ ವೈಯಕ್ತಿಕ ಹಾಗೂ ಸಾಮಾಜಿಕ ಸ್ವಚ್ಛತೆಯ ಬಗೆಗಿನ ಮಾಹಿತಿಯನ್ನು ನೀಡಿದರು.


ಅದಲ್ಲದೆ ಜಾತಿ ಧರ್ಮ ಭೇದವನು ತೊರೆದು ಮನುಕುಲ ಒಂದೇ ನಾವು ಭಾರತೀಯರು ಎಂಬ ಭಾವನೆಯನ್ನು ಬಿತ್ತುವ ಸಾರವನ್ನು ಹೊಂದಿರುವ ನಾಟಕವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here