ಪುತ್ತೂರು: ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ದೈವಜ್ಞರ ಹಾಗೂ ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದ ಪ್ರಕಾರ ದೇವಸ್ಥಾನದ ಪುನಃ ನಿರ್ಮಾಣ ಹಾಗೂ ಬ್ರಹ್ಮಕಲಶ ನಡೆಸುವ ಬಗ್ಗೆ ಫೆ.9 ರಂದು ಶ್ರೀ ಕ್ಷೇತ್ರದ ಆಡಳಿತ ಮೋಕ್ತೇಸರ ರಮೇಶ್ ರೈ ಮಿಶನ್ ಮೂಲೆರವರ ಅಧ್ಯಕ್ಷತೆಯಲ್ಲಿ ಭಕ್ತರ ಪೂರ್ವಭಾವಿ ಸಭೆ ನಡೆಯಿತು.
ಈ ಸಭೆಯಲ್ಲಿ ಆಡಳಿತ ಮೊಕ್ತೇಸರ ರಮೇಶ್ ರೈ ಮಿಶನ್ ಮೂಲೆ, ಅಧ್ಯಕ್ಷ ರಾಮ ಶೆಟ್ಟಿ, ಲೆಕ್ಕ ಪರಿಶೋಧಕ ವಿಶ್ವನಾಥ ರೈ ಮಿಶನ್ ಮೂಲೆ, ಕಾರ್ಯದರ್ಶಿ ಕೆ.ಬಿ ಶೇಖರ, ಉಪಾಧ್ಯಕ್ಷರಾದ ಸಂತೋಷ್ ಕುಮಾರ್, ಸತೀಶ್ ಎಂ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸಂತೋಷ್ ರೈ, ಸುಂದರ ಕೆ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ ಸಹಿತ ನೂರಾರು ಭಕ್ತಾದಿಗಳು ಹಾಜರಿದ್ದು, ದೇವಸ್ಥಾನದ ಪುನಃ ನಿರ್ಮಾಣದ ಕುರಿತು ಸಮರ್ಪಕ ಸಲಹೆ ಸೂಚನೆಗಳನ್ನು ಪಡೆದುಕೊಂಡರು.
ಹೆಚ್ಚಿನ ವಿಷಯಕ್ಕಾಗಿ ಮುಂದಿನ ಸಾರ್ವಜನಿಕ ಸಭೆಯನ್ನು ಫೆ.23 ರಂದು ಬೆಳಿಗ್ಗೆ ಶ್ರೀ ಕ್ಷೇತ್ರದ ವಠಾರದಲ್ಲಿ ಆಯೋಜಿಸಲಾಗಿದ್ದು, ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.