ಕುಂಜೂರುಪಂಜ ಇರುವೆರ್ ಉಳ್ಳಾಕುಲು ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಶ್ರೀದುರ್ಗಾ ಭಜನಾ ಮಂದಿರದ ವಾರ್ಷಿಕೋತ್ಸವ

0

ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದ 22ನೇ ವಾರ್ಷಿಕೋತ್ಸವ ಹಾಗೂ ನೂತನವಾಗಿ ನಿರ್ಮಾಣಗೊಂಡ ಗ್ರಾಮದೈವ ಇರುವೆರ್ ಉಳ್ಳಾಕುಲು ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.10ರಂದು ನೆರವೇರಿತು.


ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವೇ.ಮೂ ಉದಯನಾರಾಯಣ ಕಲ್ಲೂರಾಯರವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಜೆ ತಂತ್ರಿಗಳ ಆಗಮನ, ಆಚಾರ್ಯವರಣ, ಸ್ಥಳಶುದ್ಧಿ, ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಪೂಜಾ ಬಲಿ, ನೂತನ ವಿಂಬ ಜಲಾಧಿವಾಸ, ಪ್ರಾಕಾರ ಬಲಿ, ಸುದರ್ಶನ ಹೋಮ, ಬಾಧಾ ಉಚ್ಚಾಟನೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.


ಫೆ.10ರಂದು ಮುಂಜಾನೆ ಶ್ರೀದುರ್ಗಾ ಭಜನಾ ಮಂದಿರದ 22ನೇ ವಾರ್ಷಿಕೋತ್ಸವದ ಅಂಗವಾಗಿ ಅರ್ಧ ಏಕಾಹ ಭಜನೆಯು ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಲಾಯಿತು. ನಂತರ 12 ಕಾಯಿ ಮಹಾಗಣಪತಿಹೋಮ, ಬ್ರಹ್ಮಕಲಶಪೂಜೆ, ಇರುವೆರ್ ಉಳ್ಳಾಕುಲು ಬಿಂಬ ಪ್ರತಿಷ್ಠಾ ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.


ಅರ್ಧ ಏಕಾಹ ಭಜನೆಯಲ್ಲಿ ಶ್ರೀಕೃಷ್ಣ ಭಜನಾ ಮಂಡಳಿ ಗುಮ್ಮಟೆಗದ್ದೆ, ಶ್ರೀರಾಮ ಭಜನಾ ಮಂಳಿ ಬೆಳಿಯೂರುಕಟ್ಟೆ, ಶ್ರೀಮಹಿಷಮರ್ದಿನಿ ಭಜನಾ ಮಂಡಳಿ ಆಜೇರು, ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ, ಶ್ರೀರಾಮ ಭಜನಾ ಮಂಡಳಿ ಬಂಗಾರಡ್ಕ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಮೊಟ್ಟೆತ್ತಡ್ಕ, ಶ್ರೀಭಟ್ಟಿ ವಿನಾಯಕ ಭಜನಾ ಮಂಡಳಿ ಬಲ್ನಾಡು, ಶ್ರೀಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಕುಮಾರಮಂಗಳ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ, ವೈದೇಹಿ-ವೈಷ್ಣವೀ ಭಜನಾ ಮಂಡಳಿ ಬೊಳುವಾರು, ಶ್ರೀಅಯ್ಯಪ್ಪ ಭಜನಾ ಮಂಡಳಿ ರೆಂಜ ಹಾಗೂ ಶ್ರೀ ಆಂಜನೇಯ ಭಜನಾ ಮಂಡಳಿ ಬೊಳ್ಳಾಣ ಇವರು ಭಜನೆ ನಡೆಸಿಕೊಟ್ಟರು.


ಸಂಜೆ ಅರ್ಧಏಕಾಹ ಭಜನೆಯ ಮಂಗಳೋತ್ಸವ, ಮಂಗಳಾರತಿ ನಡೆಯಲಿದೆ. ನಂತರ ಧಾರ್ಮಿಕ ಸಭಾ ಕಾರ್ಯಕ್ರಮ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಟೀಮ್ ಮಂಜುಶ್ರೀ ತಂಡದವರಿಂದ ಕುಸಲ್ಡೊಂತೆ ಅಸಲ್’ ಹಾಸ್ಯ ಕಾರ್ಯಕ್ರಮ, ರಾತ್ರಿ ಅಭಿನಯ ಆರ್ಟ್ ಇವರಿಂದ ’ಯಾನ್ ಪನೋಡಾ ಏರ್ಂದ್’ ಎಂಬ ತುಳು ನಾಟಕ ನಡೆಯಲಿದೆ.


ನಾಳೆ(ಫೆ.11) ದೈವಗಳ ನೇಮ:
ಕಾರ್ಯಕ್ರಮದ ಕೊನೆಯ ದಿನವಾದ ಫೆ.11ರಂದು ಬೆಳಿಗ್ಗೆ ಗ್ರಾಮದೈವಗಳಾದ ಇರುವೆರ್ ಉಳ್ಳಾಕುಲು ದೈವಗಳ ನೇಮೋತ್ಸವ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here