ಕಡಬ: ಜ.31ರಂದು ನಿಧನರಾದ ಎಡಮಂಗಳ ಗ್ರಾಮದ ಮಾಲೆಂಗ್ರಿ ನಿವಾಸಿ ಕಿಟ್ಟಣ್ಣ ರೈ ಕಲಾಯಿರವರ ಶ್ರದ್ದಾಂಜಲಿ ಸಭೆ ಫೆ.10 ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಸರಸ್ವತಿ ಸಭಾಭವನದಲ್ಲಿ ನಡೆಯಿತು.
ಎಡಮಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿರವರು ನುಡಿನಮನ ಸಲ್ಲಿಸಿ, ಪ್ರಗತಿಪರ ಕೃಷಿಕರಾಗಿದ್ದ ಕಿಟ್ಟಣ್ಣ ರೈ ಕಲಾಯಿರವರು ಸಮಾಜಕ್ಕೆ ಮತ್ತು ಕುಟುಂಬಕ್ಕೆ ಮಾದರಿ ವ್ಯಕ್ತಿಯಾಗಿದ್ದರು. ಅವರ ಸರಳತೆ, ಶ್ರೇಷ್ಠ ಸಂಸ್ಕಾರ, ನಯ ವಿನಯದಿಂದ ಕೂಡಿದ ವ್ಯಕ್ತಿತ್ವ, ನ್ಯಾಯ ನಿಷ್ಠೆಯ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಗುಣಗಾನ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಅಶ್ವಿನ್ ಎಲ್ ಶೆಟ್ಟಿ, ಮಹಾಪ್ರಬಂಧಕ ವಸಂತ ಜಾಲಾಡಿ, ಸಹಾಯಕ ಮಹಾಪ್ರಬಂಧಕ ಸುನಾದ್ ರಾಜ್ ಶೆಟ್ಟಿ, ಸುರಬಿ ಬಾರ್ ಆಂಡ್ ರೆಸ್ಟೋರೆಂಟ್ನ ಮಾಲಕ ಅಜಯ್ ಕುಮಾರ್, ರಾಮಕೃಷ್ಣ ರೈ ಕಲ್ಲಡ್ಕ, ಶಶಿಕುಮಾರ್ ರೈ ಕುಂಜತ್ತೋಡಿ, ಅಮರನಾಥ ರೈ ಕುಂಜತ್ತೋಡಿ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸಿಬ್ಬಂದಿಗಳಾದ ಅಶ್ವಿನ್ ಎಸ್ ರೈ, ಜಿತೇಶ್, ನಾಗೇಶ್ ಕೊಲ್ಲೆಸಾಗು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬೆಳ್ಳಾರೆ ಶಾಖೆ ಮೇನೇಜರ್ ಸಂತೋಷ್, ನಿವೃತ್ತ ಮೇನೇಜರ್ ಗೋಪಿನಾಥ ರೈ ಮಾಡಾವು, ಎಸ್ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖಾ ಮೆನೇಜರ್ ಹರೀಶ್ ರೈ, ದೀಕ್ಷಿತ್, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸುಬ್ರಹ್ಮಣ್ಯ ಶಾಖಾ ವ್ಯವಸ್ಥಾಪಕ ಪ್ರದೀಪ್ ಹೆಚ್ ರೈ, ಕಡಬ ಸಿಎ ಬ್ಯಾಂಕ್ ಸಿಬ್ಬಂದಿ ಆನಂದ ಗೌಡ ಕೋಂಕ್ಯಾಡಿ, ಶೇಷಪತಿ ರೈ ಗುತ್ತುಪಾಲ್, ನಿವೃತ್ತ ಮೆನೇಜರ್ ಬಾಲಕೃಷ್ಣ ರೈ ಪುತ್ತೂರು, ಗಿರೀಶ್ ರೈ ಮರ್ದೂರು, ರಾಧಕೃಷ್ಣ ರೈ ಪೊಯ್ಯೆತ್ತೂರು, ಬಾಲಕೃಷ್ಣ ರೈ ಪೊಯ್ಯೆತ್ತೂರು, ಚಂದ್ರಶೇಖರ ಶೆಟ್ಟಿ ಸುರ್ಯ, ಸೀತಾರಾಮ ರೈ ಸುರ್ಯ, ವಿಠಲ ರೈ, ನಾರಾಯಣ ಶೆಟ್ಟಿ ಬಳ್ಳಡ್ಕ, ರಾಧಾಕೃಷ್ಣ ರೈ ಮಾಲೆಂಗ್ರಿ, ಕಡಬದ ಉದ್ಯಮಿಗಳಾದ ಕಿಶಾನ್ ಕುಮಾರ್ ರೈ, ಸಾಯಿರಾಮ್ ಜನರಲ್ ಸ್ಟೋರ್ನ ಮಾಲಕ ಕರುಣಾಕರ ಕೆ., ಕಡಬ ಪ್ರಶಾಂತ್ ವೈನ್ ಸ್ಟೋರ್ ಮೇನೇಜರ್ ಮಾಧವ ಗೌಡ ನೆಕ್ಕಿಲ, ಶರತ್ ಕುಮಾರ್, ರಂಜಿತ್ ಎಂ, ಕೊರಗಪ್ಪ ರೈ ಕುಂಜತ್ತೋಡಿ ಸೇರಿದಂತೆ ಹಲವು ಮಂದಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಮೃತರ ಪತ್ನಿ ಕುಸುಮಾವತಿ ರೈ ಮಾಲೆಂಗ್ರಿ, ಪುತ್ರರಾದ ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಕಡಬ ಶಾಖಾ ವ್ಯವಸ್ಥಾಪಕ ವಿಜಯ್ಕುಮಾರ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬೆಳ್ಳಾರೆ ಶಾಖೆ ಸಿಬ್ಬಂದಿ ಪ್ರಸಾದ್ ಕುಮಾರ್ ರೈ, ಸೊಸೆಯಂದಿರಾದ ಅರ್ಚನಾ ವಿ ರೈ, ಸವಿತಾ ಪಿ. ರೈ, ಮೊಮ್ಮಕ್ಕಳಾದ ತನ್ವಿ ರೈ, ತಶ್ವಿ ರೈ, ಪ್ರಾಪ್ತಿ ಪಿ ರೈ, ಇಶಾನ್ ಪಿ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.