





ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವದಿಂದ ನ.29 ಮತ್ತು 30ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಅಂಗವಾಗಿ ನಡೆಯುವ ಸಾಮೂಹಿಕ ವಿವಾಹ ಮತ್ತು ಹಿಂದುವೀ ಸಾಮ್ರಾಜ್ಯೋತ್ಸವಕ್ಕೆ ಸಂಬಂಧಿಸಿ ನ.28ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ದರ್ಬೆ ವೃತ್ತದಿಂದ ಸಂಜೆ ಗಂಟೆ ೪ಕ್ಕೆ ಆರಂಭಗೊಳ್ಳಲಿದೆ. ಗ್ರಾಮಾಂತರ ಭಾಗದಿಂದ ಹಸಿರುಹೊರೆಕಾಣಿಕೆ ಹೊತ್ತ ವಾಹನಗಳು ದರ್ಬೆಯಲ್ಲಿ ಸೇರಿ ಅಲ್ಲಿಂದ ಸುಮಾರು ನೂರು ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮಾಡಿರುವ ಉಗ್ರಾಣದ ತನಕ ನಡೆಯಲಿದೆ.







