ಪುತ್ತೂರು: ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಪುತ್ತೂರು ಟಿಎಪಿಸಿಎಂಎಸ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಟಿಎಪಿಸಿಎಂಎಸ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ದ.ಕ.ಜಿಲ್ಲೆಯಲ್ಲಿ ಸಹಕಾರಿ ರಂಗ ಬಲಿಷ್ಠವಾಗಿ ಬೆಳೆದಿದೆ. ಇನ್ನು ಮುಂದೆಯೂ ಎಲ್ಲರೂ ಸೇರಿ ಸಹಕಾರಿಯನ್ನು ಇನ್ನಷ್ಟು ಬಲಪಡಿಸೋಣ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿ ಮಾತನಾಡಿ ಸಹಕಾರಿ ರಂಗಕ್ಕೆ ಶಶಿಕುಮಾರ್ ರೈರವರ ಕೊಡುಗೆ ಮಹತ್ತರವಾಗಿದೆ. ಅವರ ನಾಯಕತ್ವದಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲಿ ಎಂದು ಹಾರೈಸಿದರು.
ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಜೇಶ್, ನಿರ್ದೇಶಕರುಗಳಾದ ಸಾಜ ರಾಧಾಕೃಷ್ಣ ಆಳ್ವ, ಚಂದ್ರಶೇಖರ ತಾಳ್ತಜೆ, ಎನ್.ಸುಭಾಷ್ ನಾಯಕ್, ಮೊಹಮ್ಮದ್ ಅಶ್ರಫ್ ಕಲ್ಲೇಗ, ಸುಜಾತಾ ರಂಜನ್ ರೈ, ಬಿ.ಜಯರಾಮ ರೈ ಬಾಲಾಯ, ಪ್ರದೀಪ್ ರೈ ಎಂ. ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.