ಶ್ರೀ ರಾಮಕುಂಜೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೆ-ದರ್ಶನ ಬಲಿ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಫೆ.11ರಂದು ನಡೆಯಿತು.


ಫೆ.೯ರಂದು ಧ್ವಜಾರೋಹಣ ನಡೆದು ಉತ್ಸವ ನಡೆಯಿತು. ಫೆ.೧೦ರಂದು ಬೆಳಿಗ್ಗೆ ಹಸಿರುವಾಣಿ ಸಮರ್ಪಣೆ, ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಶ್ರೀ ದೇವರ ಬಲಿ ಹೊರಟು ಉತ್ಸವ, ಕೆರೆಕರೆ, ಈರಕೀಮಠ, ಕುಕ್ಕೇರಿಕಟ್ಟೆ, ಸಂಪ್ಯಾಡಿ ಕಟ್ಟೆ, ಶಾರದಾಂಬಾ ಕಟ್ಟೆ, ಕೆದಿಲ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯಿತು. ಫೆ.೧೧ರಂದು ಬೆಳಿಗ್ಗೆ ನಂದಾದೀಪೋತ್ಸವ, ಬಳಿಕ ಉತ್ಸವ ಆರಂಭಗೊಂಡು ಮಧ್ಯಾಹ್ನ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಸದಸ್ಯರೂ ಆದ ಅರ್ಚ ಅನಂತ ಉಡುಪ, ಸದಸ್ಯರಾದ ಕರುಣಾಕರ ಯು.ದೊಡ್ಡ ಉರ್ಕ, ಗುರುವಪ್ಪ ಕುಂಡಾಜೆ, ಶೈಲಜಾ ಬಿ.ಆಳ್ವ ಗುತ್ತುಮನೆ, ಪುಷ್ಪಾವತಿ ಜಯಪ್ರಕಾಶ್ ಬಾರಿಂಜ, ಜಗದೀಶ ಶೆಟ್ಟಿ ಅಂಬಾಬೀಡು, ಮಹೇಶ್ ಬಿ.ಬಾಂತೊಟ್ಟು, ಜಗದೀರ್ಶ ಎ.ಅಜ್ಜಿಕುಮೇರು, ಉತ್ಸವ ಸಮಿತಿ ಅಧ್ಯಕ್ಷ ಮಾಧವ ಆಚಾರ್ಯ ಇಜ್ಜಾವು, ಕಾರ್ಯದರ್ಶಿ ಸತೀಶ್ ಭಟ್ ಎಂ., ಉಪಾಧ್ಯಕ್ಷರಾದ ನಾರಾಯಣ ಭಟ್ ತೋಟ, ಸೇಸಪ್ಪ ರೈ ಬಾಂತೊಟ್ಟು, ರಾಧಾಕೃಷ್ಣ ಕೆ.ಎಸ್., ದಿವಾಕರ ರಾವ್ ಪಂಚವಟಿ, ಧರ್ಮಪಾಲ ರಾವ್ ಕಜೆ, ರಾಮ ಭಟ್ ಬೃಂದಾವನ, ತಿಮ್ಮಪ್ಪ ಗೌಡ ಆನ ಹಾಗೂ ಉತ್ಸವ ಸಮಿತಿ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಶ್ರೀ ಮಹಿಳಾ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here