ಪುತ್ತೂರು: ಕನ್ನಡ ಅಕ್ಷರ ಮಾಲೆಯಲ್ಲಿ ಸ್ವಚ್ಚತೆಯ ಸಂದೇಶ ಸಾರುವ ಮೂಲಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹೊಸ ಪ್ರಯೋಗ ಮಾಡಿದ್ದಾರೆ. ‘ಅ’ದಿಂದ‘ಅಃ’ತನಕದ ಅಕ್ಷರಗಳಲ್ಲಿ ಒಂದೊಂದು ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ಅ ಅಲ್ಲಿ ಇಲ್ಲಿ ಕಸ ಎಸೆಯಬೇಡಿ, ಆ ಆ ಕಸ ಜೀವಿಗಳ ಆರೋಗ್ಯ ಕೆಡಿಸುತ್ತದೆ, ಇ ಇರುವ ಕಸವನ್ನು ಬೇರ್ಪಡಿಸಿ ಕಸದ ವಾಹನಕ್ಕೆ ಕೊಡಿ, ಈ ಈ ರೀತಿ ಕಸ ವಿಲೇವಾರಿಯಲ್ಲಿ ಸಹಕರಿಸಿ, ಉ ಉತ್ತಮವಾದ ಶುಚಿ ಪರಿಸರ ನಮ್ಮದಾಗಲಿ, ಊ ಊರಿನ ಸೌಂದರ್ಯ ಕಸ ಮುಕ್ತ ಪರಿಸರದಲ್ಲಿದೆ. ಋ ಋಣಾತ್ಮಕ ಪರಿಣಾಮ ಬೀರುವ ಪ್ಲಾಸ್ಟಿಕ್ ಬೇಡವೇ ಬೇಡ, ಎ ಎಲ್ಲೆಡೆ ಸ್ವಚ್ಚತೆಯ ಅರಿವು ಮೂಡಿಸೋಣ, ಏ ಏರುತ್ತಿರುವ ಮಾಲಿನ್ಯ ತಡೆಯಲು ಕಸಕ್ಕೆ ಬೆಂಕಿ ಹಾಕದಿರೋಣ, ಐ ಐಶ್ವರ್ಯಕ್ಕಿಂತಲೂ ಮಿಗಿಲು ಸ್ವಚ್ಛತೆಯೇ ಆರೋಗ್ಯ, ಒ ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ, ಓ ಓದು ಬರಹದಷ್ಟೇ ಸ್ವಚ್ಚತೆಯು ಮುಖ್ಯ, ಔ ಔಷಧಗಳಿಂದ ದೂರವಿರಲು ಸ್ವಚ್ಛತೆಯೇ ದಾರಿದೀಪ, ಅಂ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಮಾರದಿರೋಣ, ಅಃ ಆಹಾ ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡೋಣ ಎಂಬ ಸಂದೇಶಗಳನ್ನು ಸಾರಿದ್ದಾರೆ.
ಶಾಲಾ ವಿದ್ಯಾರ್ಥಿ ನಾಯಕಿ ಸ್ಮೃತಿ ಪಲ್ಲತ್ತಾರುರವರು ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಸಂದೇಶ ಇದಾಗಿದ್ದು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾರ್ಗದರ್ಶನ ನೀಡಿದ್ದಾರೆ. ಶಾಲಾ ಅಧ್ಯಾಪಕರಾದ ರಾಜು ಎಸ್.ಟಿ ನಿರ್ದೇಶನ ಹಾಗೂ ಶಿಕ್ಷಕ ವೃಂದದವರು ಸಹಕಾರ ನೀಡಿದ್ದಾರೆ. ಈ ವಿಡಿಯೋ ಸಂದೇಶವನ್ನು ಪುತ್ತೂರು ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.