ಪುತ್ತೂರು: ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ ಇದುಪ್ಪಾಡಿ, ಮಂಜಕೊಟ್ಯ-ಮುಂಡಾಳಗುತ್ತು ಇದರ ವಾರ್ಷಿಕ ನೇಮೋತ್ಸವ ಫೆ. 11 ಮತ್ತು 12 ರಂದು ವಿಜೃಂಭಣೆಯಿಂದ ಜರಗಿತು.
ಫೆ. 11 ರಂದು ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ದೈವಗಳ ತಂಬಿಲ, ಪುಳಿಮರಡ್ಕ ಸ್ಥಾನದಲ್ಲಿ ತಂಬಿಲ ನಡೆಯಿತು. ಸಂಜೆ ಕೆದಂಬಾಡಿ ಬೀಡು ಪಟ್ಟದ ಚಾವಡಿಯಿಂದ ಮಾರಿ ದೈವ ಹೊರಡುವ ಕಾರ್ಯಕ್ರಮ ನಡೆಯಿತು. ರಾತ್ರಿ ಕೆಂಚಿರಾಯ ಸೇವೆ ನಡೆಯಿತು. ಫೆ. 12 ರಂದು ಬೆಳಿಗ್ಗೆ ನಾಗಬ್ರಹ್ಮ ದೈವದ ನೇಮ ನಡೆದ ಬಳಿಕ ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವದ ನೇಮೋತ್ಸವ ಜರಗಿತು, ಬೂಳ್ಯ ಪ್ರಸಾದ ವಿತರಣೆ ನಡೆಯಿತು.
![](https://puttur.suddinews.com/wp-content/uploads/2025/02/1951b8ce-9cc1-4bf7-966d-e6749a3134b4.jpg)
ಕಾರ್ಯಕ್ರಮದ ದಿನ ಬೆಳಿಗ್ಗೆ ಮತ್ತು ಸಂಜೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಜರಗಿತು. ಮುಂಡಾಳಗುತ್ತು ಯಜಮಾನ ನಿವೃತ್ತ ಡಿವೈಎಸ್ಪಿ ಶಾಂತಾರಾಮ ರೈ
ಹಾಗೂ ಹದಿನೆಂಟು ವರ್ಗ ಮತ್ತು ಊರ ಸಮಸ್ತರು ಉಪಸ್ಥಿತರಿದ್ದರು. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮುಖಂಡರುಗಳು, ಪರವೂರ ಹಿತೈಷಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದರು.
![](https://puttur.suddinews.com/wp-content/uploads/2025/02/e4bbcb2f-3aab-49cb-856a-459f6cf5244d.jpg)