ಕೆಯ್ಯೂರು: ಕೆಯ್ಯೂರು ಗ್ರಾಮದ ಪೂಂಜಿರೋಟು ಅಂಕತ್ತಡ್ಕ ನೇತ್ರಾವತಿ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವವು ಫೆ.12 ರಂದು ನಡೆಯಿತು.


ಬೆಳಿಗ್ಗೆ ಗಣಪತಿ ಹೋಮ, ಶುದ್ಧಿ ಕಲಶ, ಸಂಜೆ ಭಂಡಾರ ತೆಗೆದು, ಬೈದೆರುಗಳ ಗರಡಿ ಇಳಿದು, ರಾತ್ರಿ ಸಾವಿರಾರು ಮಂದಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆದು, ರಾತ್ರಿ ಶ್ರೀ ಶಾರದಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ, ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ ಇವರಿಂದ ಕದಂಬ ಕೌಶಿಕೆ ಯಕ್ಷಗಾನ ನಡೆಯಿತು.

ರಾತ್ರಿ ಸುರಿಯದ ಬಲಿ, ಕಿನ್ನಿದಾರು ನೇಮ ನಡೆದು, ಫೆ. 13ರಂದು ಬೈದೆರುಗಳ ಸುರಿಯ, ಭಕ್ತಾದಿಗಳಿಗೆ ಗಂಧ ಪ್ರಸಾದ ವಿತರಣೆ ನಡೆಯಿತು.
