ನೆಲ್ಯಾಡಿ: ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ತಿರ್ಲೆ ಕೊಣಾಲು ಇದರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಯಕ್ಷಶ್ರೀ ಹವ್ಯಾಸಿ ಮಹಿಳಾ ತಾಳಮದ್ದಳೆ ಬಳಗ ಪುತ್ತೂರು ಇವರಿಂದ ರಾಜಾ ಪರೀಕ್ಷಿತ ಎಂಬ ತಾಳಮದ್ದಳೆ ನಡೆಯಿತು. ಮುಮ್ಮೇಳದಲ್ಲಿ ಭಾಗವತರಾಗಿ ಚಿನ್ಮಯ್ ಭಟ್ ಕಲ್ಲಡ್ಕ, ಚೆಂಡೆಯಲ್ಲಿ ಮುರಳೀಧರ ಕಲ್ಲೂರಾಯ, ಮದ್ದಳೆಯಲ್ಲಿ ಜಯರಾಮ ಭಟ್ ಪದ್ಯಾಣ ಭಾಗವಹಿಸಿದ್ದರು.
ಮುಮ್ಮೇಳದಲ್ಲಿ ಪರೀಕ್ಷಿತನಾಗಿ ಆಶಾಲತಾ, ಕಲಿಯಾಗಿ ಗೀತಾ ಕರಾಯ, ಇರಾವತಿ ಮತ್ತು ಶುಕಮುನಿಯಾಗಿ ವೀಣಾನಾಗೇಶ್ ತಂತ್ರಿ, ಕಶ್ಯಪನಾಗಿ ರಮಾದೇವಿ, ತಕ್ಷಕನಾಗಿ ವೀಣಾ ಸರಸ್ವತಿ, ಶಮಿಕನಾಗಿ ಮಂಗಳ ಗೌರಿ, ಶೃಂಗಿಯಾಗಿ ರೇಷ್ಮಾ ಭಾಗವಹಿಸಿದ್ದರು.