ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಫೆ.11ರಂದು ಬೆಳಿಗ್ಗೆ ಯಕ್ಷಶ್ರೀ ಹವ್ಯಾಸಿ ಮಹಿಳಾ ತಾಳಮದ್ದಳೆ ಬಳಗದಿಂದ ಚಕ್ರೇಶ್ವರ ಪರೀಕ್ಷಿತ ಎಂಬ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಕಾಶ್ ನಿಡ್ವಣ್ಣಾಯ ಮುಂಬೈ, ನಿತೀಶ್ ಕುಮಾರ್ ಎಂಕಣ್ಣಮೂಲೆ, ಚೆಂಡೆಯಲ್ಲಿ ಮೋಹನ ಶರವೂರು, ಮದ್ದಳೆಯಲ್ಲಿ ಶ್ರೀಹರಿ ದೇವಾಡಿಗ ನಗ್ರಿ ಸಹಕರಿಸಿದರು.
ಮುಮ್ಮೇಳದಲ್ಲಿ ಪರೀಕ್ಷಿತನಾಗಿ ಆಶಾಲತಾ, ಕಲಿಯಾಗಿ ಗೀತಾ ಕರಾಯ, ಇರಾವತಿ ಮತ್ತು ಶುಕ ಮುನಿಯಾಗಿ ವೀಣಾ ನಾಗೇಶ್ ತಂತ್ರಿ, ತಕ್ಷಕನಾಗಿ ವೀಣಾ ಸರಸ್ವತಿ, ಕಶ್ಯಪನಾಗಿ ರಮಾದೇವಿ, ಶೃಂಗಿಯಾಗಿ ರೇಷ್ಮಾರಾವ್ ಭಾಗವಹಿಸಿದ್ದರು.