ಪುತ್ತೂರು: ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಸರ್ವೆ ಗ್ರಾಮದ ನೇರೋಳ್ತಡ್ಕದಲ್ಲಿ ಬೋರ್ ವೆಲ್ ಫ್ಲಶಿಂಗ್ ಕಾರ್ಯ ಆರಂಭಗೊಂಡಿದೆ.
ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಸ್ಥಳೀಯರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಗ್ರಾ.ಪಂ ಸಾಮಾನ್ಯ ಸಭೆಯಲ್ಲೂ ನೀರಿನ ಸಮಸ್ಯೆ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ಇದೀಗ ಫ್ಲಶಿಂಗ್ ಕಾರ್ಯ ಆರಂಭಗೊಂಡಿದ್ದು, ಫ್ಲಶಿಂಗ್ ಮಾಡಿ ನೀರನ್ನು ಪರೀಕ್ಷಿಸಿ ಬಳಿಕ ಮುಂದಿನ ಕಾರ್ಯ ನಡೆಸಲಾಗುವುದು ಎಂದು ತಿಳಿದು ಬಂದಿದೆ.