ಈಶ್ವರಮಂಗಲ ಸಾಂತ್ಯ ನವೀನ್ ಆತ್ಮಹತ್ಯೆ

0

ಪುತ್ತೂರು: ಈಶ್ವರಮಂಗಲ ಸಾಂತ್ಯ ನಿವಾಸಿ ನವೀನ್ (42ವ) ರವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫೆ.22ರಂದು ನಡೆದಿದೆ.

ಕಳೆದ 15 ವರ್ಷದಿಂದ ನಾರಾಯಣ ಗೌಡ ಉರಿಕ್ಯಾಡಿ ಅವರ ಮಾಲಕತ್ವದ ಶ್ರೀ ಗಜವದನ ಗೂಡ್ಸ್ ಸರ್ವೀಸಸ್ ಲಾರಿಯಲ್ಲಿ ಚಾಲಕರಾಗಿದ್ದ ಇವರು ಗೋಡೌನ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈಶ್ವರಮಂಗಲ ಹೊರಠಾಣೆಯ ಎಎಸ್‌ಐ ಚಂದ್ರಶೇಖ‌ರ್ ಮತ್ತು ಸಿಬ್ಬಂದಿಗಳು, ಪುತ್ತೂರಿನ ತನಿಖಾ ತಂಡದವರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿರುತ್ತಾರೆ.

ಮೃತರು ತಂದೆ ಅಪ್ಪಕುಂಞ ಮಣಿಯಾಣಿ, ತಾಯಿ ಪುಷ್ಪಾವತಿ, ಪತ್ನಿ ವನಿತಾ ರವರನ್ನು ಅಗಲಿದಾರೆ.

LEAVE A REPLY

Please enter your comment!
Please enter your name here