ಪುತ್ತೂರು: ಮಾಡನ್ನೂರುನಲ್ಲಿ ಸ್ವಲಾತ್ ವಾರ್ಷಿಕೋತ್ಸವ ಫೆ.20ರಂದು ನಡೆಯಿತು. ಇದರ ಅಂಗವಾಗಿ ಏಕದಿನ ಧಾರ್ಮಿಕ ಪ್ರವಚನದಲ್ಲಿ ಸ್ವಲಾತ್ ಮಜ್ಲಿಸ್ ಪುತ್ತೂರು ಕೇಂದ್ರ ಜಮಾ ಮಸೀದಿ ಮುದರ್ತಿಸ್ ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಞಳ್ ನೇತೃತ್ವ ವಹಿಸಿ ದುವಾ ನೆರವೇರಿಸಿದರು.



ಧಾರ್ಮಿಕ ಪ್ರವಚನವನ್ನು ಶಫೀಕ್ ಬದ್ ರಿ ಅಲ್ ಬಾಖವಿ ಕೇರಳ ಇವರು ಮಾಡಿದರು. ಮಾಡನ್ನೂರು ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಅಜೀಜ್ ಬುಷ್ರಾ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಿನ್ಸಿಪಲ್ ಅಡ್ವಕೇಟ್ ಹನಿಫ್ ಹುದವಿ, ಕಾವು ಜುಮ್ಮಾ ಮಸೀದಿ ಕತೀಬರಾದ ಅಬ್ದುಲ್ ಶುಕೂರ್ ದಾರಿಮಿ, ಎಂ ಎ ಮಹಮೂದ್ ಮುಸ್ಲಿಯರ್ ಮಾಡನ್ನೂರು , ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಕೆ ಕೆ ಇಬ್ರಾಹಿಂ ಹಾಜಿ, ಎ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಬಿ ಎಂ ಅಬ್ದುಲ್ಲ ಮಾಡನ್ನೂರು, ಜುಮಾ ಮಸೀದಿ ಕೋಶಾಧಿಕಾರಿ ಯೂಸುಫ್ ಹಾಜಿ ಅರೆಯ್ಲಾಡಿ ಉಪಸ್ಥಿತರಿದ್ದರು. ಮಾಡನ್ನೂರು ಮಸೀದಿ ಕತೀಬರಾದ ಎಸ್ ಬಿ ಮಹಮ್ಮದ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಡನ್ನೂರು ಜಮಾತ್ ಕಮಿಟಿ ಯ ಸದಸ್ಯರು, ಮಾಡನ್ನೂರು ಯಂಗ್ ಮೆನ್ಸ್ ಕಮಿಟಿ ಯ ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು.ಹಫೀಜ್ ಮಹಮ್ಮದ್ ಆರಿಫ್ ಅಸ್ಲವಿ ಸದರ್ ನೂರುಲ್ ಇಸ್ಲಾಂ ಮದ್ರಸ ಮಾಡನ್ನೂರು ಸ್ವಾಗತಿಸಿ, ವಂದಿಸಿದರು.
