ಪುತ್ತೂರು: ಕೋಡಿಂಬಾಡಿ ಗ್ರಾಮದ ಡೆಕ್ಕಾಜೆ-ಪರನೀರು ರಸ್ತೆ ಕಾಂಕ್ರಿಟೀಕರಣಕ್ಕೆ 5 ಲಕ್ಷ ರೂ ಅನುದಾನ ಒದಗಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಪರನೀರು ನಿವಾಸಿಗಳು ಅಭಿನಂದನೆ ಸಲ್ಲಿಸಿ ಕೋಡಿಂಬಾಡಿಯ ಬಾರಿಕೆ ಸಮೀಪದ ಅರ್ಬಿ ಕ್ರಾಸ್ ಬಳಿ ಅಳವಡಿಸಿದ್ದ ಕಟೌಟ್ ಕಳವಾದ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಕಟೌಟ್ ಅಳವಡಿಸಲಾಗಿದ್ದು ಫೆ.21ರಂದು ರಾತ್ರಿ ಕಿಡಿಗೇಡಿಗಳು ಫ್ರೇಮ್ ಸಹಿತ ಕಟೌಟ್ ಕಳವು ಮಾಡಿದ್ದಾರೆ. ಈ ಬಗ್ಗೆ ನೊಂದಿರುವ ಪದ್ಮಪ್ಪ ಪೂಜಾರಿ ಪರನೀರು ಅವರು ಫೆ. 23ರಂದು ಬೆಳಿಗ್ಗೆ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಅಭಿವೃದ್ಧಿ ಕಾರ್ಯ ಮಾಡಿರುವ ಶಾಸಕರನ್ನು ಅಭಿನಂದಿಸಿ ನಾವು ಅಳವಡಿಸಿದ್ದ ಕಟೌಟ್ ಕಳವು ಮಾಡಿರುವವರಿಗೆ ಸರಿಯಾದ ಬುದ್ಧಿ ನೀಡುವಂತೆ ಪ್ರಾರ್ಥಿಸಿದ್ದಾರೆ.