ಹಿರಿಯ ಪತ್ರಿಕಾ ಛಾಯಾಚಿತ್ರಕಾರ ಯಜ್ಞರಿಗೆ ಕಲಾಶ್ರಯ ಪ್ರಶಸ್ತಿ ಪ್ರದಾನ
ಪುತ್ತೂರು: ಭಾರತೀಯ ಸಾಂಸ್ಕೃತಿಕ ಕಲಾ ಕ್ಷೇತ್ರದ ಭರತ ನಾಟ್ಯದಲ್ಲಿ ಹಲವು ನೃತ್ಯದ ಮೂಲಕ ಹಲವು ಕೊಡುಗೆಗಳನ್ನು ನೀಡಿದ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಸಾಂಸ್ಕೃತಿಕ ಸಚಿವಾಲಯದ ಸಹಕಾರದೊಂದಿಗೆ 9ನೇ ವರ್ಷದ ‘ನರ್ತನಾವರ್ತನಾ -2025’ ಮಾ.2ರಂದು ಸಂಜೆ ಗಂಟೆ 5 ರಿಂದ ಬಪ್ಪಳಿಗೆ ಜೈನ ಭವನದಲ್ಲಿ ನಡೆಯಲಿದೆ. ಪ್ರತಿ ವರ್ಷದಂತೆ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭರತನಾಟ್ಯ ಕಲಾವಿದರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಇದರ ಜೊತೆಗೆ ಯಶಸ್ವಿ ಛಾಯಾಚಿತ್ರಕಾರ ಹಿರಿಯ ಛಾಯಾಚಿತ್ರಕಾರ ಯಜ್ಞ ಅವರಿಗೆ ಕಲಾಶ್ರಯ ಪ್ರಶಸ್ತಿ ಪ್ರದಾನ ನಡೆಯಲಿದೆ.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದುಷಿ ಪ್ರೀತಿಕಲಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಸಂಸ್ಥೆ ಆರಂಭಗೊಂಡು 29 ವರ್ಷ ಆಗಿದೆ. 20ನೇ ವರ್ಷಕ್ಕೆ ವರ್ಷದ ವಿಶೇಷ ಕಾರ್ಯಕ್ರಮವಾಗಿ ನರ್ತನಾವರ್ತನವನ್ನು ಆರಂಭಿಸಿದೆವು. ಈ ಭಾರಿ ಅಂತರಾಷ್ಟ್ರೀಯ ಖ್ಯಾತಿಯ ಮತ್ತು ಕಲಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಮುಂಬೈಯ ಮೀರಾ ಶ್ರೀನಾರಾಯಣನ್ ಅವರಿಂದ ಭರತನಾಟ್ಯ ಪ್ರಸ್ತುತಿ ಪ್ರದರ್ಶನಗೊಳ್ಳಲಿದೆ. ಇವರು ಮೂಲತಃ ಕೇರಳದವರಾಗಿದ್ದು ಇವರು ಪ್ರಸ್ತುತ ಮುಂಬೈಯಲ್ಲಿ ವಾಸ್ತವ್ಯ ಹೊಂದಿದ್ದಾರೆ.ಇವರಿಗೆ ನಟುವಾಂಗದಲ್ಲಿ ಬೆಂಗಳೂರಿನ ಕೆ.ಎನ್.ನವ್ಯಶ್ರೀ, ಹಾಡುಗಾರಿಕೆಯಲ್ಲಿ ಬಿಜೇಶ್ ಕೃಷ್ಣ, ನಟುವಾಂಗ ಶ್ರೀಲತಾ ಆಚಾರ್ಯ, ಮೃದಂಗ ಚಾರುದತ್ತ್ ವಿ.ವಿ, ಕೊಳಲಿನಲ್ಲಿ ಹರಿಪ್ರಸಾದ್ ಸಹಕರಿಸಲಿದ್ದಾರೆ.

ಯಜ್ಞ ಅವರಿಗೆ ಕಲಾಶ್ರಯ ಪ್ರಶಸ್ತಿ:
ಸಂಜೆ ಗಂಟೆ 5 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ದೀಪಪ್ರಜ್ವಲನೆಯನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಅವರು ಮಾಡಲಿದ್ದಾರೆ. ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಇದೇ ಸಂದರ್ಭ ಯಶಸ್ವಿ ಛಾಯಾಗ್ರಾಹಕ ಹಿರಿಯ ಪತ್ರಿಕಾ ಛಾಯಾಚಿತ್ರಕಾರರಾದ ಯಜ್ಞ ಅವರಿಗೆ ‘ಕಲಾಶ್ರಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಹೇಳಿದರು.