ಪುತ್ತೂರು: ಸುಮಾರು 80 ವರ್ಷಗಳ ಇತಿಹಾಸವಿರುವ ಬಪ್ಪಳಿಗೆ ರಾಗಿಕುಮೇರಿ ಸ.ಹಿ.ಪ್ರಾ ಶಾಲೆಯಲ್ಲಿ ಫೆ.24ರಂದು ನಡೆದ ಹಿರಿಯ ವಿದ್ಯಾರ್ಥಿಗಳ ಸಂಗಮ, ವಿವಿಧ ಕ್ರೀಡಾಕೂಟ, ವಿಶ್ರಾಂತ ಶಿಕ್ಷಕರು, ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭವು ಮೇಳೈಸಿದೆ.
ಬೆಳಿಗ್ಗೆ ನಡೆದ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ವಿಶಾಲಾಕ್ಷಿ ಬಪ್ಪಳಿಗೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಸಂಜೆಯ ತನಕ ಮಹಿಳೆಯವರು ಮತ್ತು ಪುರುಷರಿಗಾಗಿ ಪ್ರತ್ಯೇಕ ವಿವಿಧ ಕ್ರೀಡಾಕೂಟಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಉತ್ಸಾಹದಲ್ಲಿ ಭಾಗವಹಿಸುವ ಮೂಲಕ ಶಾಲಾ ದಿನಗಳ ನೆನಪುಗಳು ಮತ್ತೆ ಮರುಕಲಿಸಿತು. ಕೆಲವು ಮನರಂಜನಾತ್ಮಕ ಕ್ರೀಡೆಗಳು ಸ್ಪರ್ಧೆಯ ಜೊತೆಗೆ ಮನರಂಜನೆಯೂ ನೀಡಿತು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿಶ್ರಾಂತ ಶಿಕ್ಷಕರು ಹಾಗೂ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ, ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ ನೆರವೇರಿತು. ಕಾರ್ಯಕ್ರಮದಲ್ಲಿ ನಿವೃತ್ತಿ ಶಿಕ್ಷಕರಾದ ಸತ್ಯಭಾಮ, ಕಮಲಾಕ್ಷಿ, ಶಾಲಾ ನಿವೃತ್ತ ಅಕ್ಷರ ದಾಸೋಹದ ಸಿಬ್ಬಂದಿಗಳಾದ ರೇವತಿ ದುಲ್ಸಿನಾ ವೇಗಸ್, ಕಟ್ಟಡದ ದಾನಿ ಶಿವ ಭಟ್, ಸಾಧಕ ಹಿರಿಯ ವಿದ್ಯಾರ್ಥಿಗಳಾದ ನಿವೃತ್ತ ಯೋಧ ಶೀನಪ್ಪ ಗೌಡ, ನಿವೃತ್ತ ಅಬಕಾರಿ ಅಧಿಕಾರಿ ಯಾಕೂಬ್ ಕಾನ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ನಿವೃತ್ತ ಚಾಲಕ ಗಿರಿಧರ ಗೌಡ, ಕೆನಾರಾ ಬ್ಯಾಂಕ್ ನಿವೃತ್ತ ಅಧಿಕಾರಿ ಮಹಮ್ಮದ್ ಸಾಹೇಬ್, ನಗರ ಸಭಾ ಸ್ವಚ್ಚತೆಯ ಮೇಲ್ವಿಚಾರಕ ಬೊಮ್ಮ ನೆಲ್ಲಿಗುಂಡಿ, ರಾಷ್ಟ್ರೀಯ ಕ್ರೀಡಾಪಟು ವಿನುಶ್ರೀ ಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು, ರಾಜ್ಯೋತ್ಸವ ತಾಲೂಕು ಪುರಸ್ಕಾರ ಪಡೆದ ಬಿ.ಎಚ್ ರಝಾಕ್ ಬಪ್ಪಳಿಗೆಯವರನ್ನು ಸನ್ಮಾನಿ, ಗೌರವಿಸಲಾಯಿತು. ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಸಹಕರಿಸುತ್ತಿರುವ ಕೃಷ್ಣಪ್ಪ ಸಿಂಗಾಣಿ, ಕ್ರೀಡಾಕೂಟದ ತೀರ್ಪುಗಾರ ಶಶಿಕುಮಾರ್ ಸಿಂಗಾಣಿ, ಮುಖ್ಯ ಶಿಕ್ಷಕಿ ಲತಾ, ಶಿಕ್ಷಕರಾದ ಸೌಮ್ಯ, ಯಶೋಧ, ಸುನೀತಾ, ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ, ಕ್ರೀಡಾಕೂಟದ ಆಯೋಜನೆಯಲ್ಲಿ ಸಹಕರಿಸಿದ ಉಮೇಶ್ ಗೌಡ ಸಿಂಗಾಣಿ, ಜಯಂತ ಗೌಡ, ಸೀತಾ ಸಿಂಗಾಣಿ, ಸುನೀತಾ ಸಿಂಗಾಣಿ, ಸುರೇಶ್ ಬಪ್ಪಳಿಗೆಯವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ನಿವೃತ್ತ ಶಿಕ್ಷಕರು ಹಾಗೂ ಸಾಧಕ ವಿದ್ಯಾರ್ಥಿಗಳು ಶಾಲಾ ದಿನಗಳ ಅನುಭಗಳನ್ನು ಹಂಚಿಕೊಂಡು ಶಾಲೆಯ ಅಭಿವೃದ್ಧಿಗೆ ತಮ್ಮ ಸಹಕಾರ ನೀಡುವ ಭರವಸೆಯನ್ನು ಹಿರಿಯ ವಿದ್ಯಾರ್ಥಿಗಳು ನೀಡಿದರು.
ಪದಗ್ರಹಣ:
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಜಯಂತ ಗೌಡ ಕರ್ಕುಂಜ, ಪ್ರಧಾನ ಕಾರ್ಯದರ್ಶಿ ಪಿ,ಬಿ ಅಬ್ದುಲ್ಲಾ, ಉಪಾಧ್ಯಕ್ಷೆ ವೇದಾವತಿ, ಸಂಚಾಲಕ ಕೃಷ್ಣಪ್ರಸಾದ್ ಸಿಂಗಾಣಿ, ಸಹ ಸಂಚಾಲಕ ರಜಾಕ್ ಬಪ್ಪಳಿಗೆ, ಸದಸ್ಯರಾದ ಹೊನ್ನಪ್ಪ ಗೌಡ ಅರ್ಬಿ, ಲೋಲಾಕ್ಷ ಬಪ್ಪಳಿಗೆ, ಶೋಭಾ ಜಗನ್ನಾಥ ಬಲ್ನಾಡು, ಬಾಲಕೃಷ್ಣ ಸಿಂಗಾಣಿಯವರಿಗೆ ಅತಿಥಿಗಳು ಪದಕ ಹಾಕುವ ಮೂಲಕ ಪದಗ್ರಹಣ ನೆರವೇರಿತು.
ಸನ್ಮಾನ ಸ್ವೀಕರಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಮಾತನಾಡಿ, ನಮ್ಮ ಮೂಲಶಾಲೆ, ನನ್ನ ಶಿಕ್ಷಣ ಮೂಲವಾಗಿರುವ ರಾಗಿಕುಮೇರಿ ಶಾಲೆಯಲ್ಲಿ ಪಡೆದ ಪ್ರಾಥಮಿಕ ಶಿಕ್ಷಣವು ಜೀನದ ದಾರಿ ತೋರಿಸಿದೆ. ಕಲಿತ ಶಾಲೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಅಭಿವೃದ್ಧಿ ಕ್ರೀಡಾ ಇಲಾಖೆಯಿಂದ ಶಾಲೆಯ ಕ್ರೀಡಾಂಗಣದ ಅಭಿವೃದ್ದಿಗೆ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಶಾಲೆಯ ಅಭಿವೃದ್ದಿಗೆ ಹಿರಿಯ ವಿದ್ಯಾರ್ಥಿ ಸಂಘ ಎಲ್ಲರೂ ಕೈ ಜೋಡಿಸಬೇಕು ಎಂದರು.
ಮಹಮ್ಮದ್ ಸಾಹೇಬ್ ಬಪ್ಪಳಿಗೆ ಮಾತನಾಡಿ, ಪ್ರಾಥಮಿಕ ಶಿಕ್ಷಣ ನೀಡಿದ ಶಿಕ್ಷಕರು ಹಾಗೂ ಶಾಲೆಯನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅವರು ಶಿಕ್ಷಣಕ್ಕೆ ಮಾತ್ರವಲ್ಲದೇ ಜೀವನ ದಾರಿ ತೋರಿಸಿದವರು. ಶಾಲೆಯ ಜೊತೆಗೆ ಬಾಂಧವ್ಯ ಹೊಂದಿದ್ದು ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ನಿವೃತ್ತ ಅಬಕಾರಿ ಅಧಿಕಾರಿ ಯಾಕೂಬ್ ಖಾನ್ ಮಾತನಾಡಿ, ರಾಗಿಕುಮೇರಿ ಶಾಲೆಯಲ್ಲಿ ನನ್ನ ಜೀವನದ ಮೊದಲ ವಿದ್ಯೆ ದೊರೆತಿದೆ. ಅಂದಿನ ಗುರುಗಳನ್ನು ಮರೆಯುವಂತಿಲ್ಲ. ಹಿರಿಯ ವಿದ್ಯಾರ್ಥಿ ಸಂಘದ ಮುಖಾಂತರ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ಅದಕ್ಕೆ ಸಹಕಾರವಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಲತಾ, ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪಿ.ಬಿಅಬ್ದುಲ್ಲಾ, ಉಪಾಧ್ಯಕ್ಷ ವೇದಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಶಸ್ವಿನಿ ತಂಡ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಕೃಷ್ಣಪ್ರಸಾದ್ ಸ್ವಾಗತಿಸಿದರು. ಬಿ.ಎಚ್ ಅಬ್ದುಲ್ ರಝಾಕ್ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಜಯರಾಮ, ರೇಖಾ, ಆಶಾ, ನೆಬಿಷಾ ಸುನೀತಾ, ಶಿಲ್ಪ, ಇಂದಿರಾ ನೆಲ್ಲಿಗುಂಡಿ, ಉಮೇಶ್ ಗೌಡ, ಹೊನ್ನಪ್ಪ ಗೌಡ, ಜಯಂತ ಗೌಡ, ಬಾಳಪ್ಪ ಗೌಡ, ಲೋಲಾಕ್ಷ, ಶಾಲಿನಿ, ಮೂಸಾ ಮೋನು, ಭರತ್, ಬಾಲಚಂದ್ರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಕರ್ಕುಂಜ ಶಾಲೆಗೆ ಎಂಬತ್ತು ವರ್ಷಗಳ ಇತಿಹಾಸವಿದೆ. ಶಾಲೆಯ 75ರ ಸಂಭ್ರಮದಲ್ಲಿ ಕಾರ್ಯಕ್ರಮ ಮಾಡುವ ನಿಟ್ಟಿನಲ್ಲಿ ಮನೆ ಮನೆ ಭೇಟಿ ನಡೆಸಲಾಗಿತ್ತು. ಆದರೆ ಬಹಳಷ್ಟು ಟೀಕೆ ವ್ಯಕ್ತವಾಗಿರುವುದು ಮನಸ್ಸಿಗೆ ನೋವುಂಟು ಮಾಡಿತ್ತು. ನಾವು ಕಲಿತ ಶಾಲೆ ಮನೆಯಿದ್ದಂತೆ ಕಲಿಸಿದ ಶಿಕ್ಷಕರು ನಮ್ಮ ಮನೆಯವರು. ಯಾವತ್ತೂ ಕಲಿತ ಶಾಲೆಯ ಬಗ್ಗೆ ಟೀಕೆ ಮಾಡಬಾರದು. ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ ಕೆ.ಜೆ ಯುಕೆಜಿ ಪ್ರಾರಂಭಿಸುವ ಯೋಜನೆಯಿದ್ದು ಎಲ್ಲರ ಸಹಕಾರ, ಪ್ರೋತ್ಸಾಹ ದೊರೆತಿದೆ. ಶಾಲೆಯನ್ನು ಉಳಿಸಿ, ಬೆಳೆಸಲು ಹೆಜ್ಜೆ ಇಟ್ಟಿದ್ದು ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಹಾಗೂ ದಾನಿಗಳ ಸಹಕಾರ, ಪ್ರೋತ್ಸಾಹವನ್ನು ಯಾಚಿಸುತ್ತೇವೆ.
-ಜಯಂತ ಗೌಡ ಕರ್ಕುಂಜ,
ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ