ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯರವರು ನಾಲ್ಕನೇ ಭಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.
ಫೆ.24ರಂದು ಕ್ಷೇತ್ರದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಸದಸ್ಯರುಗಳಾಗಿ ಅರ್ಚಕ ವರ್ಗದಿಂದ ಕೃಷ್ಣ ಬಡಿಕಿಲ್ಲಾಯ, ಸುಬ್ರಹ್ಮಣ್ಯ ಗೌಡ ಹಣಿಯೂರು, ಧೀರಜ್ ಗೌಡ ಹಿರ್ಕುಡೆಲು, ಸುದೀರ್ ಪ್ರಸಾದ್ ಆನಾಜೆ, ಕೇಶವ ಪೆಲತ್ತಡಿ, ಚಂದ್ರಶೇಖರ ನಾಯ್ಕ್ ಕುದ್ಮಾನು, ಸರೋಜಿನಿ ಅರ್ಕ, ಯಶೋಧ ಹೊಸೊಕ್ಲುರ ಆಯ್ಕೆಯಾಗಿದ್ದಾರೆ.
ಕ್ಷೇತ್ರದ ಆಡಳಿತಾಧಿಕಾರಿ ಜಂಗಪ್ಪರವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಸೌಂದರ್ಯ ಪಿ. ಮಂಜಪ್ಪ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನ ಜಿಲ್ಲಾ ಸದಸ್ಯರಾದ ಶಿವನಾಥ ರೈ ಮೇಗಿನ ಗುತ್ತು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.