ಹವಾಮಾನದ ವೈಪರೀತ್ಯದಿಂದಾಗಿ ದಿನೇ- ದಿನೇ ತಾಪಮಾನ ಏರುತ್ತಿದ್ದು, ಬಿಸಿಲಿನ ಧಗೆ ವಿಪರೀತವಾಗುತ್ತಿದೆ. ಮನುಷ್ಯರಿಗೆ ಈ ಸುಡು ಬಿಸಿಲಿನ ತಾಪ ಸಹಿಸೋದೆ ಕಷ್ಟವಾಗುತ್ತಿರುವಂತಹ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿರುವ ಪಕ್ಷಿಗಳ,ಜೀವಜಂತುಗಳ ಪಾಡೇನು …? ಈ ನಿಟ್ಟಿನಲ್ಲಿ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಸಜಂಕಾಡಿಯ ವಿದ್ಯಾರ್ಥಿಗಳು ಪ್ರಭಾರ ಮುಖ್ಯಗುರುಗಳಾದ ಸುಮಲತ ಪಿ.ಕೆ ಅವರ ಮಾರ್ಗದರ್ಶನದಲ್ಲಿ ಶಾಲಾ ಆವರಣದಲ್ಲಿರುವ ಗಿಡ,ಮರಗಳಿಗೆ ಬಾಟಲಿ ,ಪಾತ್ರೆಗಳನ್ನು ಇಟ್ಟು ಅದರಲ್ಲಿ ಎಲ್ಲಾ ರೀತಿಯ ಜೀವಜಂತುಗಳಿಗೆ ನೀರೂಣ್ಣಿಸುವ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ.
ಪರಿಸರ ಪ್ರೀತಿಯ ಜೊತೆಗೆ ಪಕ್ಷಿಗಳು ಮತ್ತು ವಿವಿಧ ಜೀವಜಂತುಗಳ ಬಗೆಗಿನ ಕಾಳಜಿ ಮೂಡಿಸುವ ಸಣ್ಣ ಪ್ರಯತ್ನ ಶಾಲಾ ಮಕ್ಖಳಿಂದ ನಡೆದಿದ್ದು , ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಈ ವಿದ್ಯಾರ್ಥಿಗಳು.
ಪಕ್ಷಿಗಳಿಗೆ ನೀರೂಣ್ಣಿಸುವ ಈ ಕೆಲಸ ತುಂಬಾ ನಮಗೆ ತುಂಬಾನೇ ಖುಷಿ ಕೊಟ್ಟಿದೆ. ನಮ್ಮ ಮನೆಯ ಅವರಣದಲ್ಲೂ ಈ ಕೆಲಸವನ್ನು ಖಂಡಿತವಾಗಿ ಮಾಡುತ್ತೇವೆ.
ಫಾತಿಮತ್ ತಪ್ಸಿಯಾ , ವಿದ್ಯಾರ್ಥಿ ನಾಯಕಿ