ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣೆಮಜಲು ಪೂವ ಪರಿಸರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮುಳಿಹುಲ್ಲು ಬೆಳೆದಿದ್ದ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, ಸ್ಥಳೀಯ ನಿವಾಸಿಗಳು ಹಾಗೂ ದಾರಿಹೋಕರು ತತ್ಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಲು ಸಫಲರಾದ್ದರಿಂದ ಭಾರೀ ಅನಾಹುತವನ್ನು ತಪ್ಪಿಸಲು ಸಾಧ್ಯವಾಗಿದೆ. ಕಾರ್ಯಾಚರಣೆಯಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಝಾಕ್ ಕೆನರಾ ಹಾಗೂ ರಫೀಕ್ ಎಂ.ಎ, ಇಸ್ಮಾಯಿಲ್ ಹಾಜಿ ಟಾಸ್ಕೋ, ವಿಶ್ವನಾಥ ಪೂವ, ಯೋಗೀಶ್, ರಫೀಕ್ ಟಾಸ್ಕೋ, ಸೋನಿ, ಸಫ್ವಾನ್ ಸವಣೂರು, ವರ್ತನ್ ಪೂವ, ಮೆಸ್ಕಾಂ ಲೈನ್ಮ್ಯಾನ್ ನಾರಾಯಣ ಮೊದಲಾದವರು ಭಾಗವಹಿಸಿದ್ದರು.