ಫೆ.28: ಮಂಗಳೂರು ಆಕಾಶವಾಣಿ ಗುಬ್ಬಿದ ಗೂಡು ಕಾರ್ಯಕ್ರಮದಲ್ಲಿ ಶ್ರೀ ರಾಮಕುಂಜೇಶ್ವರ ಆ.ಮಾ.ಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮ

0

ರಾಮಕುಂಜ: ಮಂಗಳೂರು ಆಕಾಶವಾಣಿಯಲ್ಲಿ ಫೆ.28ರಂದು ಬೆಳಿಗ್ಗೆ 10.35ಕ್ಕೆ ಪ್ರಸಾರವಾಗುವ ಗುಬ್ಬಿದ ಗೂಡು ಕಾರ್ಯಕ್ರಮದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮ ಪ್ರಸಾರವಾಗಲಿದೆ.


ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಮೂಲ ಜಾನಪದ ಕುಣಿತಗಳ ಹಾಡು ಮತ್ತು ಅದರ ಪರಿಚಯವನ್ನು ತಿಳಿಸಿಕೊಡಲಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಾಲಾ ಶಿಕ್ಷಕಿ ಸರಿತಾ ಜನಾರ್ದನ್‌ರವರು ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಸಂಸ್ಥೆಯ ಮುಖ್ಯಗುರುಗಳು, ಆಡಳಿತಾಧಿಕಾರಿ, ವ್ಯವಸ್ಥಾಪಕರು ಹಾಗೂ ಶಿಕ್ಷಕ ವೃಂದದವರು ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here