ಬಡಗನ್ನೂರು: ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ಎಸ್ಸಿಗೆ ಬರೆಯಲು ಬಡಗನ್ನೂರು ಗ್ರಾ.ಪಂ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು. ಬಡಗನ್ನೂರು ಗ್ರಾ.ಪಂ ನ 2024-25ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ಪಡುಮಲೆ ಶಾಲಾ ವಿದ್ಯಾರ್ಥಿ ನಾಯಕಿ ಪಲ್ಲವಿ ರವರ ಅಧ್ಯಕ್ಷತೆಯಲ್ಲಿ ಮತ್ತು ಮಹಿಳಾ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ ಎಂ ರವರ ಅಧ್ಯಕ್ಷತೆಯಲ್ಲಿ ಫೆ.27ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಇತ್ತೀಚೆಗೆ ಕೇರಳ ಮೂಲದಿಂದ ಅಪರಿಚಿತ ವ್ಯಕ್ತಿಗಳು ಬೈಕ್ ಮೂಲಕ ಬಂದು ಕೈೂಲ ಬಡಗನ್ನೂರು ಶಾಲಾ 4ನೇ ತರಗತಿಯ ಬಾಲಕನನ್ನು ʼಬಾʼ ಎಂದು ಕರೆದಿರುವುದು ಮತ್ತು ಮಹಿಳೆಯರ ಪೋನ್ ನಂಬರ್ ಕೇಳುವ ಮೂಲಕ ಕಿರುಕಳ ನೀಡಿ ಮಕ್ಕಳ ಮತ್ತು ಮಹಿಳೆಯರನ್ನು ರವಾನಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲಿಸ್ ವರಿಷ್ಠಾಧಿಕಾರಿ ರವರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಶಾಲಿನಿ ಮಾತನಾಡಿ, ಮಕ್ಕಳಲ್ಲಿ ಸಾಮಾಜಿಕ ಮನೋಭಾವನೆ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದ ಜಾಗೃತಿ ಮೂಡಿಸುವ ಉದ್ದೇಶ ಮಕ್ಕಳ ಗ್ರಾಮ ಸಭೆ ನಡೆಸಲಾಗುತ್ತಿದೆ.
ಅನುದಾನಿತ ಶಾಲೆಯಲ್ಲಿ ಮೂಲ ಸೌಲಭ್ಯ ಒದಗಿಸುವುದು ಆ ಪ್ರದೇಶದ ಆಡಳಿತ ಮಂಡಳಿ ಜವಾಬ್ದಾರರಾಗಿರುತ್ತಾರೆ. ಸರಕಾರಿ ಶಾಲೆ ಮತ್ತು ಅನುದಾನಿತ ಶಾಲೆಗೆ ತುಂಬ ವ್ಯತ್ಯಾಸ ಇದೆ. ಸರಕಾರಿ ಶಾಲೆಗಳ ಸಂಪೂರ್ಣ ಜವಾಬ್ದಾರಿ ಸರ್ಕಾರದಾಗಿದೆ. ಅನುದಾನಿತ ಶಾಲೆಯಲ್ಲಿ ಅರ್ಧಭಾಗ ಕಮಿಟಿ ಅರ್ಧಭಾಗ ಸರಕಾರದಾಗಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಆಧಾರವಾಗಿ ಶಿಕ್ಷಕ ನೇಮಕಾತಿ ಅಗುತ್ತದೆ. ಈಗ ಖಾಲಿ ಹುದ್ದೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೀಡಲಾಗುತ್ತದೆ. ಸಾಧ್ಯವಾದ ಮಟ್ಟಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಮಾಡಲಾಗತ್ತಿದೆ. ತಮ್ಮ ಸಮಸ್ಯೆಯನ್ನು ಈಗಾಗಲೇ ಗ್ರಾ.ಪಂ ಗೆ ತಿಳಿಸಿದ್ದೀರಿ, ಅವರು ಮೇಲಾಧಿಕಾರಿಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ. ಮುಂದಿನ ದಿವಸಗಳಲ್ಲಿ ತಮ್ಮ ಎಲ್ಲಾ ಸಮಸ್ಯೆ ಬಗಹರಿಯುವಂತಾಗಲಿ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆ ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ ಮಾತನಾಡಿ, ಮಕ್ಕಳ ಹಕ್ಕನ್ನು ಮತ್ತು ಕರ್ತವ್ಯ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಭಾಗ್ಯಲಕ್ಷ್ಮಿ ಯೋಜನೆ ಮತ್ತು ಸುಕನ್ಯಾ ಯೋಜನೆ ಒಟ್ಟಾಗಿದೆ. ಇದರಿಂದ ಭಾಗ್ಯಲಕ್ಷ್ಮೀ ಯೋಜನೆ ಮಾಡಿದವರು ಸುಕನ್ಯಾ ಯೋಜನೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಭಾಗಲಕ್ಷ್ಮಿ ಯೋಜನೆ ಫಲಾನುಭವಿಗಳು ಸುಕನ್ಯಾ ಯೋಜನೆ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದರು. ಮಕ್ಕಳಿಗೆ ಯಾವುದೇ ಸಮಸ್ಯೆ ಸಂಭವಿಸಿದ ಸಂದರ್ಭದಲ್ಲಿ 1098 ಸಹಾಯವಾಣಿ ಕರೆ ಮಾಡುವಂತೆ ತಿಳಿಸಿದ ಅವರು ಮಕ್ಕಳಿಗೆ ಹಕ್ಕಿನ ಜವಾಬ್ದಾರಿ ಜತೆಗೆ, ಅಷ್ಟೇ ಕರ್ತವ್ಯ ಪ್ರಜೆ ಇದೆ. ಇದನ್ನು ಅರಿತುಕೊಂಡು ಜೀವನ ನಡೆಸುವಂತೆ ತಿಳಿ ಹೇಳಿದರು.
ವಿವಿಧ ಶಾಲಾ ಮಕ್ಕಳಿಂದ ಬಂದ ಸಮಸ್ಯೆ;-
ಆಟದ ಸಾಮಾಗ್ರಿ, ಶುದ್ಧ ಕುಡಿಯುವ ನೀರು, ಶೌಚಾಲಯ ದುರಸ್ತಿ, ಶಾಲಾ ಅವರಣಗೋಡೆ ದುರಸ್ತಿ, ಕೊಠಡಿ ಗೋಡೆ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ರಸ್ತೆ ಬದಿ ಅಪಾಯಕಾರಿ ಕೆರೆ ತಡೆಗೋಡೆ ನಿರ್ಮಾಣ ಶಿಕ್ಷಕರ ಕೊರತೆ, ಕುಡಿಯುವ ನೀರಿನ ವಿದ್ಯುತ್ ಬಿಲ್ ರಿಯಾಯಿತಿ, ದೈಹಿಕ ಶಿಕ್ಷಣ ಶಿಕ್ಷಕ ನೇಮಕಾತಿ, ಕೊಠಡಿ ಸಮಸ್ಯೆ ವಿಜ್ಞಾನ ಪ್ರಯೋಗ ಸಾಮಗ್ರಿ ಕೊರತೆ ಇತ್ಯಾದಿ ಸಮಸ್ಯೆ ವಿವಿಧ ಶಾಲಾ ಮಕ್ಕಳು ಸಭೆಯ ಮುಂದಿಟ್ಟರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಸಿ ಸುಬ್ಬಯ್ಯ ಸಮಸ್ಯೆಗಳನ್ನು ನಮೂದಿಸಿಕೊಂಡು ಗ್ರಾ.ಪಂ ನ ಶೇಕಡಾ 2 ವಿಧಿಯಲ್ಲಿ ಕ್ರೀಡಾ ಸಾಮಗ್ರಿ ನೀಡುವ ಅದೇಶ ಸರ್ಕಾರದ ಮಟ್ಟದಿಂದ ಇದೆ ಗ್ರಾ.ಪಂ ನಿಂದ ಕುಡಿಯುವ ನೀರು, ಅವರಣ ಗೋಡೆ ಶೌಚಾಲಯ ದುರಸ್ತಿ ಮತ್ತಿತರ ಕೆಲಸ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗವುದು. ಕೊಠಡಿ ಸಮಸ್ಯೆ ಶಿಕ್ಷಕರ ಸಮಸ್ಯೆ ಇತ್ಯಾದಿ ಇಲಾಖಾ ಮೆಲಾಧಿಕಾರಿಗಳಿಗೆ ಬರೆಯಲು ನಿರ್ಣಯ ಮಾಡಲಾಗುವದು ಎಂದು ಹೇಳಿದರು.
ಪಡುವನ್ನೂರು ಬಿಟ್ ಪೋಲೀಸ್ ಬಸವರಾಜು ಮಕ್ಕಳ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು.
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಬಡಗನ್ನೂರು ಸಮುದಾಯ ಆರೋಗ್ಯಾಧಿಕಾರಿ ಪ್ರಜ್ಞಾ ಆರೋಗ್ಯ ಮಾಹಿತಿ ನೀಡಿದರು. ಪಡುವನ್ನೂರು ಸಮುದಾಯ ಆರೋಗ್ಯಾಧಿಕಾರಿ ದಿವ್ಯಶ್ರೀ ಸುಳ್ಯಪದವು ನವೋದಯ ಶಾಲಾ ಸಭಾಂಗಣದಲ್ಲಿ ನಡೆಯಲಿರುವ ಉಚಿತ ಕಣ್ಣಿನ ತಪಾಸಣೆ ಬಗ್ಗೆ ಮಾಹಿತಿ ನೀಡಿದರು.
ಸಂಜೀವ ಒಕ್ಕೂಟದ ಮೇಲ್ವಿಚಾರಕಿ ನಮಿತಾ ಸಂಜೀವಿನಿ ಸ್ವ ಸಹಾಯ ಸಂಘದ ಸೌಲಭ್ಯಗಳ ಮಾಹಿತಿ ನೀಡಿ ಮಾತನಾಡಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಿಟ್ಟಿನಲ್ಲಿ ಕೇಂದ್ರ ಸರಕಾರ ವೈಯಕ್ತಿಕ ಹಾಗೂ ಸ್ವ ಸಹಾಯ ಗುಂಪುಗಳ ಮೂಲಕ ಸುಮಾರು 2.5 ಲಕ್ಷ ಸಾಲ ಸೌಲಭ್ಯ ನೀಡುತ್ತದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಶಾಲಾ ಅಧ್ಯಾಪಕ ವೃಂದದವರು, ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಸಂಜೀವಿನಿ ಒಕ್ಕೂಟದ ಸದಸ್ಯರು ಮತ್ತು ವಿವಿಧ ಸ್ವ ಸಹಾಯ ಸಂಘದ ಸದಸ್ಯರು, ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.