ಕಾಣಿಯೂರು: ಪುಣ್ಚತ್ತಾರು ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಎ.3, 4ರಂದು ನಡೆಯಲಿರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಕೊಯ್ಯುವ ಮೂಹೂರ್ತವು ಮಾ.1ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಮುಕ್ತೇಸರರಾದ ವೆಂಕಟ್ರಮಣ ಆಚಾರ್ಯ, ಜನಾರ್ಧನ ಆಚಾರ್ಯ ಕೃಷ್ಣ ಆಚಾರ್ಯ, ಆಡಳಿತ ಮಂಡಳಿ ಉಪಾಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಆಡಳಿತ ಮಂಡಳಿ ಸದಸ್ಯ ಸಂಜೀವ ರೈ ಪೈಕ, ಕಾಣಿಯೂರು ಶ್ರೀ ಮಠದ ಮ್ಯಾನೇಜರ್ ಶ್ರೀನಿಧಿ ಆಚಾರ್ಯ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

