
ಉಪ್ಪಿನಂಗಡಿ: ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ. ಉಪ್ಪಿನಂಗಡಿ ಇದರ ಉಪ್ಪಿನಂಗಡಿ, ನೆಲ್ಯಾಡಿ ಹಾಗೂ ಕಡಬ ಶಾಖಾ ಸಿಬ್ಬಂದಿಗಳಿಗೆ ವೃತ್ತಿ ತರಬೇತಿ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ಮೈಸೂರು ಪ್ರಾಂತ್ಯದ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್. ತರಬೇತಿ ನೀಡಿದರು. ಸಹಕಾರಿ ಸಂಸ್ಥೆಯಲ್ಲಿ ಸಿಬ್ಬಂದಿಯ ಕಾರ್ಯ ಚಟುವಟಿಕೆ, ಕಡತ ನಿರ್ವಹಣೆ, ಸಾಲ ವಸೂಲಾತಿಗೆ ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಇತರ ವಿಷಯಗಳಲ್ಲಿ ಮಾಹಿತಿಯನ್ನು ನೀಡಿದರು.
ಸಂಘದ ಎಲ್ಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭ ಸಂಘದ ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ರೋಬರ್ಟ್ ಡಿಸೋಜ, ಉಪಾಧ್ಯಾಕ್ಷರಾದ ಜೆರೋಮ್ ಬ್ರಾಕ್ಸ್, ನಿರ್ದೇಶಕರಾದ ಹೆನ್ರಿ ಲೋಬೊ, ಸೆಬೆಸ್ಟಿಯನ್ ಲೋಬೊ, ವಿನ್ಸೆಂಟ್ ವೇಗಸ್, ಮ್ಯಾಕ್ಸಿಂ ಲೋಬೊ ಹಾಗೂ ಐರಿನ್ ಲೋಬೊ ಭಾಗವಹಿಸಿದ್ದರು.