ಇದು ಬಹುದಿನಗಳ ಕನಸು- ನಿವೃತ್ತ ಅಬಕಾರಿ ಇನ್ಸ್ಪೆಕ್ಟರ್ ಅಂಗಾರ
ಪುತ್ತೂರು: ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಕೆಳಭಾಗದ ಕಟ್ಟಡದ ಮುಂಭಾಗಕ್ಕೆ ಕೊರತೆಯಿದ್ದ ಇಂಟರ್ಲಾಕ್ ವ್ಯವಸ್ಥೆಯು ದಾನಿಗಳಾದ ನಿವೃತ್ತ ಅಬಕಾರಿ ಇನ್ಸ್ಪೆಕ್ಟರ್ ಅಂಗಾರ ಇವರ ಕೊಡುಗೆಯಿಂದ ನೆರವೇರಿತು. ತೆಂಗಿನಕಾಯಿ ಒಡೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಹಾರಾಡಿ ಶಾಲೆಗೆ ತನ್ನ ಕೈಯಲ್ಲಾದ ಕೊಡುಗೆ ನೀಡಬೇಕೆಂಬುದು ಬಹುದಿನಗಳ ಕನಸಾಗಿತ್ತು. ಇಂದು ನನಗೆ ಖುಷಿಯಾಗಿದೆ. ಈ ಶಾಲೆ ಮುಂದೆಯೂ ಇನ್ನಷ್ಟು ಹೆಸರು ಗಳಿಸುವಂತಾಗಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾನ್ಯ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್ ಆರ್ ಮಾತನಾಡಿ, ಶಾಲೆಯು ಇನ್ನಷ್ಟು ತನ್ನ ಅವಶ್ಯಕತೆಗಳನ್ನು ಪೂರೈಸಿಕೊಂಡು ಮಾದರಿ ಶಾಲೆಯಾಗಲಿ, ಕೊಡುಗೆಯಿತ್ತ ಅಂಗಾರ ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಎಸ್ ಡಿಎಂಸಿ ಅಧ್ಯಕ್ಷೆ ಸುಲೋಚನ ಶುಭ ಹಾರೈಸಿದರು.
ಮುಖ್ಯ ಶಿಕ್ಷಕರಾದ ಕೆ.ಕೆ ಮಾಸ್ತರ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯೊಂದಿಗೆ ಅಂಗಾರ ಅವರ ಸೇವಾ ಮನೋಭಾವವನ್ನು ಕೊಂಡಾಡಿದರು. ಹಿರಿಯ ಶಿಕ್ಷಕಿ ಗಂಗಾವತಿ ಅವರು ವಂದಿಸಿ, ಪದವೀಧರ ಶಿಕ್ಷಕ ಜನಾರ್ಧನ ದುರ್ಗ ಅವರು ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು. ಎಸ್ ಡಿಎಂಸಿ ಸದಸ್ಯರು, ಸಿಆರ್ ಪಿ ಪ್ರಸಾದ್ ಕೆ ವಿ ಎಲ್ ಎನ್ ಅವರು ಉಪಸ್ಥಿತರಿದ್ದರು.