ರಾಜ್ಯ ಸರಕಾರದ ಹೊಸ ಯೋಜನೆಯ ಲಾಭ ಪಡೆದುಕೊಳ್ಳಿ: ಸುದೇಶ್ ಶೆಟ್ಟಿ
ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ಸರಕಾರ ಕಾರ್ಮಿಕ ಇಲಾಖಾ ವ್ಯಾಪ್ತಿಗೆ ಚಾಲಕರನ್ನು ಸೇರಿಸಿದ್ದು, ಇದು ಬಡ ಚಾಲಕರಿಗೆ ವರದಾನವಾಗಿದೆ. ಕಾರ್ಮಿಕ ಇಲಾಖೆಗೆ ಚಾಲಕರು ತನ್ಮ ಹೆಸರು ನೋಂದಾಯಿಸಿಕೊಂಡಲ್ಲಿ ಸರಕಾರದಿಂದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು.
ಅವರು ಪುತ್ತೂರು ಶಾಸಕರ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿಸಿದ ಕಾರ್ಮಿಕರ ಭದ್ರತಾ ಕಲ್ಯಾಣ ಯೋಜನೆಗೆ ಚಾಲಕರ ನೊಂದಾವಣೆ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾನಾತನಾಡಿದರು.ಸಭೆಯಲ್ಲಿ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ರಿತೇಶ್ ಜೆ ಶೆಟ್ಟಿ, ಜಯಪ್ರಕಾಶ್ ಬದಿನಾರು , ನಿಹಾಲ್ ಪಿ ಶೆಟ್ಟಿ, ಯೋಗಿಶ್ ಸಾಮಾನಿ ಮಠಂತಬೆಟ್ಟು, ರಾಮಣ್ಣ ಪಿಲಿಂಜ, ಮಾದ್ಯಮ ಮುಖ್ಯಸ್ಥ ರಾದ ಕೃಷ್ಣ ಪ್ರಸಾದ್ ಬೊಳ್ಳಾವು ಉಪಸ್ಥಿತರಿದ್ದರು.
ಮಾ.9 ರಂದು ಭಾನುವಾರ ಉಚಿತ ನೋಂದಣಿ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ರಿಕ್ಷಾ, ಹಾಗೂ ಇತರೆ ಘನ ವಾಹನ ಚಾಲಕರು, ನಿರ್ವಾಹಕರು, ಕ್ಲೀನರ್, ಗ್ಯಾರೇಜ್ ಪಂಕ್ಚರ್ ಹಾಕುವವರು, ಗ್ಯಾರೇಜು ಕಾರ್ಮಿಕರು ನೋಂದಾವಣಾ ಶಿಭಿರದಲ್ಲಿ ಭಾಗವಹಿಸಬಹುದು.

ದಾಖಲೆಗಳು:
ಆಧಾರ್ ಕಾರ್ಡ್, ರೇಶನ್ ಕಾರ್ಡ್ , ಬ್ಯಾಂಕ್ ಪಾಸ್ ಪುಸ್ತಕ, ಲೈಸೆನ್ಸ್ ,ಬ್ಯಾಡ್ಜ್ ( ಚಾಲಕರಿಗೆ) ಪೊಟೋ, ಕುಟುಂಬದ ಅವಲಂಬಿತರ ಆಧಾರ್ ಕಾರ್ಡ್, ಆಧಾರ್ ಲಿಂಕ್ ಆದ ಮೊಬೈಲ್, ಮತ್ತು ಉದ್ಯೋಗ ಪ್ರಮಾಣಪತ್ರ / ಸ್ವಯಂ ಘೋಷಣಾ ಪತ್ರ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ 9449663719, 8904707969 ಕರೆ ಮಾಡಿ