ಪುಣಚ ಬೈಲುಗುತ್ತು ಸೀತಾರಾಮ ರೈಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಪುಣಚ: ಇತ್ತೀಚೆಗೆ ನಿಧನರಾದ ಪುಣಚ ಬೈಲುಗುತ್ತು ಸೀತಾರಾಮ ರೈಯವರ ವೈಕುಂಠ ಸಮರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಪುಣಚ ಮಹಿಷಮರ್ದಿನಿ ದೇವಸ್ಥಾನದ ಅನ್ನಪೂರ್ಣ ಸಭಾಭವನದಲ್ಲಿ ಮಾ.5ರಂದು ನಡೆಯಿತು.


ಮೃತರ ಬಾವ ಜಗನ್ಮೋಹನ ರೈ ಸೂರಂಬೈಲು ಮಾತನಾಡಿ, ಸೀತಾರಾಮ ರೈ ಅವರು ಉತ್ತಮ ಮನೆತನದಿಂದ ಬಂದವರು. ಅವರು ಸರಳ ಸಜ್ಜನಿಕೆಯ ಜೀವನದೊಂದಿಗೆ ಆದರ್ಶ ಬದುಕು ಪಡೆದು ಸಮಾಜದಲ್ಲಿ ಉತ್ತಮ ಗೌರವ, ವ್ಯಕ್ತಿತ್ವಕ್ಕೆ ಪಾತ್ರರಾಗಿದ್ದರು. ಅವರ ಆದರ್ಶ,ಬದುಕು ವ್ಯಕ್ತಿತ್ವ ಅವರ ಮನೆಯಲ್ಲಿ ಬೆಳಗಲಿ ಎಂದು ನುಡಿ ನಮನ ಸಲ್ಲಿಸಿದರು.


ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌’ನ ನಿರ್ದೇಶಕ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಸಮಿತಿ ಸದಸ್ಯರುಗಳು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಮ್.ಎಸ್ ಮಹಮ್ಮದ್, ಬೈಲುಗುತ್ತು ಕುಟುಂಬದ ಯಜಮಾನ ಜಗನ್ನಾಥ ರೈ ಬೈಲುಗುತ್ತು ಸೇರಿದಂತೆ ಹಲವು ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು, ಜನ ಪ್ರತಿನಿಧಿಗಳು, ಬೈಲುಗುತ್ತು ಕುಟುಂಬಸ್ಥರು, ಬಂಧುಗಳು, ಹಲವಾರು ಮಿತ್ರರು, ಹಿತೈಷಿಗಳು ಆಗಮಿಸಿ ಪುಷ್ಪಾರ್ಚನೆ ಮಾಡಿದರು. ಮೃತರ ಸಹೋದರ ಬಾಲಕೃಷ್ಣ ರೈ ಬೈಲುಗುತ್ತು, ಸಹೋದರಿಯರಾದ ಕುಸುಮಾ ಭಂಡಾರಿ ಕಿದೂರುಗುತ್ತು, ವಿಲಾಸಿನಿ ರೈ ಬೈಕಾಜೆ, ವಿಮಲಾ ಪದ್ಮನಾಭ ಭಂಡಾರಿ ಕಲಾಯಿ, ಸೌಮ್ಯಲತಾ ಕೆ. ಶೆಟ್ಟಿ ಅಬೂರುಕಟ್ಟೆ ಸೋಮವಾರಪೇಟೆ, ವಸಂತಿ ಆರ್. ಅಳ್ವ ಮಿತ್ತಿಮಾರು, ಶೋಭಾ ಎಮ್.ಶೆಟ್ಟಿ ಬೈಲುಗುತ್ತು ಉಪಸ್ಥಿತರಿದ್ದರು.


ಸೀತಾರಾಮ ರೈಯವರ ಪತ್ನಿ ವಿಜಯಲಕ್ಷ್ಮೀ ಎಸ್.ರೈ, ಪುತ್ರರಾದ ಸಂತೋಷ್ ರೈ, ಸಚಿನ್ ರೈ, ಸೊಸೆಯಂದಿರಾದ ದಿವ್ಯಾ ಎಸ್.ರೈ, ಮಾನಸ ಎಸ್.ರೈ, ಮೊಮ್ಮಕ್ಕಳಾದ ಆಸ್ತ ಎಸ್.ರೈ, ಅತಿದ್ ಎಸ್.ರೈ ಅತಿಥಿಗಳನ್ನು ಸತ್ಕರಿಸಿದರು.


ಮೌನ‌ ಪ್ರಾರ್ಥನೆ, ಪುಷ್ಪಾರ್ಚನೆ-:
ಅಗಲಿದ ಪುಣಚ ಬೈಲುಗುತ್ತು ಸೀತಾರಾಮ ರೈಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು  ಅರ್ಪಿಸಲಾಯಿತು. 

LEAVE A REPLY

Please enter your comment!
Please enter your name here