ಮಾ.8ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ʼಮೋಹಿನಿʼ ತುಳು ನಾಟಕ ಸಂಭ್ರಮಾಚರಣೆ – ಉಚಿತ ಪ್ರದರ್ಶನ

0

ಪುತ್ತೂರು: ಸಾಯಿ ಕಲಾವಿದೆರ್ ಕುಡ್ಲ ಇವರ ನೇತೃತ್ವದಲ್ಲಿ ʼಮೋಹಿನಿʼ ಕೌಟುಂಬಿಕ ಕುತೂಹಲಭರಿತ ತುಳು ನಾಟಕ ಇದರ ಸಂಭ್ರಮಾಚರಣೆಯು ಮಾ.8ರಂದು ಸಂಜೆ ಗಂಟೆ 6.30ಕ್ಕೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ. ನಾಟಕ ಪ್ರದರ್ಶನ ಉಚಿತವಾಗಿ ನಡೆಯಲಿದೆ ಎಂದು ನಾಟಕ ಕಲಾವಿದ ರಾಮಕೃಷ್ಣ ಪಡುಮಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು‌.


ನಾಟಕದ ಮುಹೂರ್ತವನ್ನು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೆರವೇರಿಸಲಾಗಿತ್ತು. ಆ ಬಳಿಕ ಎರಡು ಕಡೆ ನಾಟಕ ಪ್ರದರ್ಶನ ಮಾಡಿದ್ದು ಇದೀಗ ಸಂಭ್ರಮಾಚರಣೆಯನ್ನು ದೇವಳದ ಗದ್ದೆಯಲ್ಲಿ ಮಾಡಲಿದ್ದೇವೆ. ತುಳು ನಾಟಕ ರಂಗದಲ್ಲಿ ಇಲ್ಲಿನ ತನಕ ಮಾಡದಂತಹ ಹಲವು ವೈಶಿಷ್ಟ್ಯಗಳನ್ನು ಈ ನಾಟಕದಲ್ಲಿ ಮಾಡಲಾಗಿದೆ ಎಂದ ಅವರು ಸಂಜೆ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಡಬ ಶ್ರೀ ಮೂಕಾಂಬಿಕಾ ಕ್ಷೇತ್ರ ಪಾಲ್ತಿಮಾರು ಇದರ ಕೇಶವ ಪಂಡಿತ್ ಉದ್ಘಾಟಿಸಲಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕ ಸಂಜೀವ ಮಠಂದೂರು, ಶಕುಂತಳಾ ಟಿ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆ ಗುತ್ತು ಸಹಿತ ಹಲವಾರು ಮಂದಿ ಗಣ್ಯರು ಆಗಮಿಸಲಿದ್ದಾರೆ ಎಂದವರು ತಿಳಿಸಿದರು‌.


ಹೆಣ್ಣು ಮಕ್ಕಳ ಅನ್ಯಾಯದ ವಿರುದ್ದ:
ನಾಟಕದ ಸಾರಥ್ಯ ವಹಿಸಿದ ಪ್ರಕಾಶ್ ರೈ ಮರುವಂತಿಲ ಅವರು ಮಾತನಾಡಿ, ಮೋಹಿನಿ ನಾಟಕವು ಹೆಸರೇ ಸೂಚಿಸಿದಂತೆ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಆಕೆಯ ಪ್ರತಿಕಾರವನ್ನು ಹೇಗಿರುತ್ತದೆ ಎಂಬ ನಿಟ್ಟಿನಲ್ಲಿ ಕೌಟುಂಬಿಕ ಕುತೂಹಲಭರಿತ ನಾಟಕವಾಗಿ ಮೂಡಿ ಬರಲಿದೆ ಎಂದು ಹೇಳಿದರು‌.

2 ಗಂಟೆ 20 ನಿಮಿಷದ ನಾಟಕ:
ನಾಟಕವು ವಿಭಿನ್ನವಾಗಿ ಮೂಡಿ ಬರಲಿದ್ದು 2 ಗಂಟೆ 20 ನಿಮಿಷ ನಾಟಕ ಪ್ರದರ್ಶನ ನಡೆಯಲಿದೆ. ತಾಂತ್ರಿಕತೆ ಮತ್ತು ಕಲಾವಿದರು ಸೇರಿ 20 ಮಂದಿ ನಾಟಕ ತಂಡದಲ್ಲಿದ್ದಾರೆ ಎಂದು ನಾಟಕದ ಸಾಹಿತ್ಯ‌ ಮತ್ತು ರಚನಾಕಾರ ಶಿವಕುಮಾರ್ ರೈ ಪುತ್ತೂರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ವಿಜಯಕುಮಾರ್, ಜಿತೇಶ್ ಮಂಗಳೂರು ಉಪಸ್ಥಿತರಿದ್ದರು‌.

LEAVE A REPLY

Please enter your comment!
Please enter your name here