ಪುತ್ತೂರು: ಕಳೆದ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಗಣಕಯಂತ್ರ ಪರೀಕ್ಷೆಯಲ್ಲಿ ದರ್ಬೆಯ ಲಕ್ಷ್ಮೀ ಟೈಪ್ರೈಟಿಂಗ್ ಕಂಪ್ಯೂಟರ್ ಸಂಸ್ಥೆಗೆ ಶೇ.100 ಫಲಿತಾಂಶ ಲಭಿಸಿದೆ.
ಸಂಸ್ಥೆಯಿಂದ ಕಂಪ್ಯೂಟರ್ ಪರೀಕ್ಷೆಗೆ ಹಾಜರಾದ 35 ವಿದ್ಯಾರ್ಥಿಗಳಲ್ಲಿ ಪ್ರಜ್ಞಾಶ್ರೀ ಕೆ.ಆರ್, ಗಣ್ಯಶ್ರೀ ಎ, ಸೌಮ್ಯ, ಕೆ.ಎಂ ಗೋಪಾಲಕೃಷ್ಣ ಭಟ್, ಹೀರಾ ಬಿ.ಎನ್, ಕೆ. ಮನೀಶ್, ಶಾರ್ವರಿ ಎ, ರಶ್ಮಿ ಯು, ರಿಶಾನ ಬಾನು ಕೆ, ನಿಶಿತಾ ಬಿ ಯವರು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದು, 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.