ಕಾವು: ಭಾರತ ಸರ್ಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ-ತುಡರ್ ಹಬ್ಬ ಮತ್ತು ಕಟೀಲು ಮೇಳದ ಯಕ್ಷಗಾನ ಬಯಲಾಟ ಇದರ ಆಮಂತ್ರಣ ಪತ್ರವನ್ನು ಮಾ.6ರಂದು ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರೀದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅರ್ಚಕ ವಿಕಾಸ್ ಕಡಮಣ್ಣಾಯ, ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಅಧ್ಯಕ್ಷ ಪುರುಷೋತ್ತಮ ಆಚಾರ್ಯ ನನ್ಯ, ಪ್ರಧಾನ ಕಾರ್ಯದರ್ಶಿ ಶ್ರೀಕುಮಾರ್ ಬಲ್ಯಾಯ, ಉಪಾಧ್ಯಕ್ಷ ಯತೀಶ್ ರೈ ಮದ್ಲ, ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಲಿಂಗಪ್ಪ ನಾಯ್ಕ ನನ್ಯ, ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಸುನೀಲ್ ನಿಧಿಮುಂಡ, ಜಗದೀಶ ನಾಯ್ಕ ಆಚಾರಿಮೂಲೆ, ಸದಸ್ಯರಾದ ಬಾಲಕೃಷ್ಣ ಪಾಟಾಳಿ ನನ್ಯ, ನಿರಂಜನ ರಾವ್ ಕಮಲಡ್ಕ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಮಾ.24 ಮತ್ತು 27ರಂದು ಕಾರ್ಯಕ್ರಮ:
ಕಾವು ನನ್ಯ ತುಡರ್ ಯುವಕ ಮಂಡಲದ 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಎರಡನೇ ದಿನವಾದ ಮಾ.24ರಂದು ನಡೆಯಲಿದೆ. ಸಂಜೆ ಗಂಟೆ 7 ರಿಂದ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇವರ ನಿರ್ದೇಶನದಲ್ಲಿ ತುಡರ್ ಕಲಾ ಸಂಘದ ವಿದ್ಯಾರ್ಥಿಗಳಿಂದ ನೃತ್ಯಾರ್ಪಣ ಕಾರ್ಯಕ್ರಮ, ರಾತ್ರಿ ಗಂಟೆ 8.30ರಿಂದ ಸಭಾ ಕಾರ್ಯಕ್ರಮ-ಸನ್ಮಾನ, ರಾತ್ರಿ ಗಂಟೆ 9.30ರಿಂದ ಕಾಪು ರಂಗತರಂಗ ಕಲಾವಿದರಿಂದ ಕುಟ್ಯಣ್ಣನ ಕುಟುಂಬ ಎಂಬ ತುಳು ತೆಲಿಕೆದ ಸಾಂಸಾರಿಕ ನಾಟಕ ನಡೆಯಲಿದೆ. ಮಾ.27ರಂದು ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರಿಂದ ಸೇವಾರೂಪದಲ್ಲಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ಕಾವು ದೇವಸ್ಥಾನದಲ್ಲಿ ನಡೆಯಲಿದೆ.